ಪೇರಡ್ಕ ಮಖಾಂ ಉರೂಸ್ ಧಾರ್ಮಿಕ ಕಾರ್ಯಕ್ರಮ – ದಾಂಪತ್ಯ ಜೀವನವೇ ಕುಟುಂಬದ ಅಡಿಪಾಯ :ಯಾಹ್ಯಾ ಬಾಖವಿ…
ಸುಳ್ಯ :ವೈವಾಹಿಕ ಜೀವನದ ಸಂತೋಷದಲ್ಲೇ ಮನುಷ್ಯನ ಮನಸ್ಸು ಸಾಂತವಾಗಿ ಸಕಾರಾತ್ಮಕ ಚಿಂತನೆಯಿಂದ ಬದುಕಲು ಸಾಧ್ಯ. ವೈವಾಹಿಕ ಜೀವನದ ನಂತರ ಕುಟುಂಬ ಕಲಹಕ್ಕೆ ಅಸ್ಪಂದ ಕೊಡಲೇಬಾರದು. ಕುಟುಂಬ ಜೀವನದ ಅಡಿಪಾಯವೇ ವೈವಾಹಿಕ ಜೀವನ ಎಂದು ಕೇರಳದ ಪ್ರಖ್ಯಾತ ವಾಗ್ಮಿ ಬಹು। ಯಾಹ್ಯಾ ಬಾಖವಿ ಪುಝಕ್ಕರ ಹೇಳಿದರು.
ಅವರು ಪೇರಡ್ಕ ವಲಿಯುಲ್ಲಾಹಿ ದರ್ಗಾ ಶರೀಫ್ ಉರೂಸ್ ಕಾರ್ಯಕ್ರಮ 2 ನೇ ದಿನದಲ್ಲಿ ಮುಖ್ಯ ಪ್ರಭಾಷಣವನ್ನು ಮಾಡಿದರು.
ತೆಕ್ಕಿಲ್ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು .ಕಾರ್ಯಕ್ರಮವನ್ನು ಅರಂತೋಡು ಬದ್ರಿಯಾ ಜುಮ್ಮಾಮಸೀದಿ ಖತೀಬರಾದ ಅಲ್ ಹಾಜ್ ಇಸಾಖ್ ಬಾಖವಿ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪೇರಡ್ಕ ಮಹಿಯದ್ದೀನ್ ಜುಮ್ಮಾಮಸೀದಿ ಅಧ್ಯಕ್ಷ ಎಸ್ ಅಲಿ ಹಾಜಿ ವಹಿಸಿದ್ದರು.ಮುಖ್ಯ ಆತಿಥಿಗಳಾಗಿ ಪೇರಡ್ಕ ಮಸೀದಿ ಖತೀಬರಾದ ಸುಹೇಲ್ ದಾರಿಮಿ,ಕೆಪಿಸಿಸಿ ಮಾಜಿ ಕಾರ್ಯದರ್ಶಿ ಟಿ.ಎಮ್.ಶಹೀದ್ ತೆಕ್ಕಿಲ್, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ, ಸುಳ್ಯ ತಾಲೂಕು ಮದರಸ ಮ್ಯಾನೇಜ್‌ಮೆಂಟ್ ಅಧ್ಯಕ್ಷ ತಾಜ್ ಮಹಮ್ಮದ್ ,ಟಿ.ಎಮ್.ಬಾಬ ಹಾಜಿ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಎಸ್.ಕೆ.ಹನೀಫ್, ಅರಂತೋಡು ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಪೇರಡ್ಕ ಜಮಾ ಅತ್ ಉಪಾಧ್ಯಕ್ಷ ಸಾಜಿದ್ ಅಝ್ಝರಿ, ಮುನೀರ್ ದಾರಿಮಿ,ಪೇರಡ್ಕ ಜಮಾ ಅತ್ ಕಾರ್ಯದರ್ಶಿ ಹಾಜಿ ರಝಾಕ್ ,ಇಬ್ರಾಹಿಂ ಮೈಲ್ ಕಲ್ಲು,ಇಬ್ರಾಹಿಂ ಶೇಟ್ಟಿಯಡ್ಕ ಮುಂತಾದವರು ಉಪಸ್ಥಿತರಿದ್ದರು.