ಪೇರಡ್ಕ ಎಂ.ಜೆ.ಎಂ ವತಿಯಿಂದ ದುಬೈ ಸಮಿತಿಯ ಸದಸ್ಯರುಗಳಿಗೆ ಸನ್ಮಾನ…

ಸುಳ್ಯ: ಪೇರಡ್ಕ ಜುಮಾ ಮಸೀದಿಯಲ್ಲಿ ಜುಮಾ ನಮಾಝಿನ ಬಳಿಕ ಪೇರಡ್ಕ ಜಮಾಯತ್ ಸದಸ್ಯರು ದುಬೈ ಸಮಿತಿ ಯ ಸಮದ್ ಪೇರಡ್ಕ,ಸಿಯಾಬ್ ಪೇರಡ್ಕ ಹಾಗೂ ಫಾರ್ಮಡ್ ಗ್ರೂಪ್ ನ ಹಾರಿಸ್ ಪಿ.ಎಂ ರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಜಮಾಅತ್ ಖತೀಬರಾದ ಅಹ್ಮದ್ ನ‌ಈಂ ಫೈಝಿ ಮ‌ಅಬರಿ, ಅಧ್ಯಕ್ಷರಾದ ಜನಾಬ್ ಟಿ‌.ಎಂ ಶಹೀದ್ ತೆಕ್ಕಿಲ್, ಸನ್ಮಾನ ಮಾಡಿದರು.
ನಂತರ ಮಾತನಾಡಿದ ಟಿ.ಎಂ.ಶಾಹಿದ್ ತೆಕ್ಕಿಲ್ ಪೇರಡ್ಕ ಜಮಾಯತ್ ಅಭಿವೃದ್ಧಿಯಲ್ಲಿ ದುಬೈ ಸಮಿತಿಯ ಕೊಡುಗೆ ಅವಿಸ್ಮರಣೀಯ. ರಹೀಮ್ ಪೇರಡ್ಕ ಇತ್ತೀಚೆಗೆ ಪೇರಡ್ಕ ಭೇಟಿ ನೀಡಿದ ಸಂದರ್ಭದಲ್ಲಿ ಮಸೀದಿಗೆ ಹಲವು ಕೊಡುಗೆ ನೀಡಿದ್ದಾರೆ. ಅದೇ ರೀತಿಯಲ್ಲಿ ರಿಪಾಯಿ ಹಾಗೂ ಸಮದ್,ಸಿಯಾಬ್ ರವರ ಕೊಡುಗೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಉಮರ್ ಪಿಕೆ, ಉಪಾಧ್ಯಕ್ಷ ಹನೀಫ್ ಟಿಬಿ, ಕಾರ್ಯದರ್ಶಿಗಳಾದ ಕೆ.ಎಂ ಉಸ್ಮಾನ್ ಮತ್ತು ಮುಹಮ್ಮದ್ ಸಿನಾನ್, ಪಾಂಡಿ ಅಬ್ಬಾಸ್ ರಹೀಮ್ ಬೀಜದಕಟ್ಟೆ ಕೋಶಾಧಿಕಾರಿ ಮುಹಮ್ಮದ್ ತೆಕ್ಕಿಲ್, ಮದ್ರಸಾ ಅಧ್ಯಾಪಕರಾದ ಹಾರಿಸ್ ಅಝ್ಹರಿ, ಅಬ್ದುಲ್ ಹಮೀದ್ ಮುಸ್ಲಿಯಾರ್, ಎಂ.ಆರ್.ಡಿ.ಎ.ಉಪಾಧ್ಯಕ್ಷರಾದ ಸಲೀಂ ಅಲ್ತಾಫ್,ಸಾಧುಮೊನ್ ಪೇರಡ್ಕಉಪಸ್ಥಿತರಿದ್ದರು. ಜಿ.ಕೆ ಹಮೀದ್ ಗೂನಡ್ಕ ಅಧ್ಯಕ್ಷರು ಎಂ.ಆರ್.ಡಿ.ಎ ಪೇರಡ್ಕ ನಿರೂಪಿಸಿದರು. ಜಮಾತಿನ ಹಿರಿಯ ಕಿರಿಯ ಸದಸ್ಯರು ಉಪಸ್ಥಿತರಿದ್ದರು.

whatsapp image 2024 08 16 at 6.59.54 pm

Related Articles

Back to top button