ಸುಳ್ಯ ನಗರ ಯೋಜನಾ ಪ್ರಾಧಿಕಾರ (SUDA) ಅಧ್ಯಕ್ಷರಾಗಿ ಕೆ. ಎಂ. ಮುಸ್ತಫ ನೇಮಕ…

ಸುಳ್ಯ: ಕರ್ನಾಟಕ ಸರ್ಕಾರ ನಗರಾಭಿವೃದ್ದಿ ಇಲಾಖೆಯಿಂದ ಸುಳ್ಯ ನಗರ ಯೋಜನಾ ಪ್ರಾಧಿಕಾರ ರಚಿಸಿ ಸದ್ರಿ ಪ್ರಾಧಿಕಾರಕ್ಕೆ ಸುಳ್ಯ ನಗರ ಪಂಚಾಯತ್ ಮಾಜಿ ಸದಸ್ಯ, ಮೀಫ್ ಶೈಕ್ಷಣಿಕ ಒಕ್ಕೂಟದ ಉಪಾಧ್ಯಕ್ಷ ಕೆ. ಎಂ. ಮುಸ್ತಫ ಸುಳ್ಯ ಇವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಗರಾಭಿವೃದ್ದಿ ಸಚಿವ ಬೈರತಿ ಸುರೇಶ್ ರವರ ಅನುಮೋದನೆ ಯೊಂದಿಗೆ ಕರ್ನಾಟಕ ಸರ್ಕಾರದ ನಗರಾಭಿವೃದ್ದಿ ಇಲಾಖೆಯು ಆದೇಶ ಹೊರಡಿಸಿದೆ. ಸ್ಪೀಕರ್ ಯು. ಟಿ. ಖಾದರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್ ಬೆಳೆಯುತ್ತಿರುವ ಸುಳ್ಯ ನಗರಕ್ಕೆ ಪ್ರತ್ಯೇಕ ಯೋಜನಾ ಪ್ರಾಧಿಕಾರ ರಚಿಸಿ ಕೆ. ಎಂ. ಮುಸ್ತಫ ರನ್ನು ಅಧ್ಯಕ್ಷರನ್ನಾಗಿ ನೇಮಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದ್ದರು .
ಮುಸ್ತಫ ರವರು ಐದು ಅವಧಿಯ 25 ವರ್ಷ ನಗರ ಪಂಚಾಯತ್ ಸದಸ್ಯರಾಗಿ, ಜಿಲ್ಲಾ ಯೋಜನಾ ಸಮಿತಿ ಸದಸ್ಯರಾಗಿ, ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷರಾಗಿ, ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ, ಸುಳ್ಯದಲ್ಲಿ 3 ಬಾರಿ ಅದ್ದೂರಿಯಾಗಿ ನಡೆದ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್ ಶಿಪ್ ನ ಪ್ರದಾನ ಸಂಘಟಕರಾಗಿ, ಸುಳ್ಯ ತಾಲೂಕು ಅಕ್ರಮ ಸಕ್ರಮ ಸದಸ್ಯರಾಗಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವ ಹೊಂದಿರುತ್ತಾರೆ.