ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಮನೆ ನಿರ್ಮಾಣಕ್ಕೆ ಸಹಾಯಧನ…

ಸುಳ್ಯ: ಟಿ ಎಂ ಶಹೀದ್ ತೆಕ್ಕಿಲ್ ರವರ 50 ನೇ ಹುಟ್ಟು ಹಬ್ಬದ ಪ್ರಯುಕ್ತ ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ ( ರಿ) ಅರಂತೋಡು ಇದರ ವತಿಯಿಂದ ಪಲ್ಲಿಮಜಲು, ಬೆಳ್ಳಾರೆಯಲ್ಲಿ ನಿರ್ಮಿಸುತ್ತಿರುವ ಕುಂಭಕ್ಕೊಡ್ ಮಹಮ್ಮದ್ ಕುಂಞಿ ಯವರ ಮಗಳಾದ ಜಹುರ ರ ಮನೆ ನಿರ್ಮಾಣ ಕಾರ್ಯಕ್ಕೆ 10 ಸಾವಿರ ರುಪಾಯಿ ಸಹಾಯಧನವನ್ನು ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ ಎಂ ಶಹೀದ್ ತೆಕ್ಕಿಲ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಉಪಸ್ಥಿತರಿದ್ದರು.
ಟಿ ಎಂ ಶಹೀದ್ ತೆಕ್ಕಿಲ್ ರವರ 50ನೇ ಹುಟ್ಟು ಹಬ್ಬದ ವರ್ಷಾಚರಣೆಯ ಪ್ರಯುಕ್ತ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ರೋಗಿಗಳಿಗೆ, ಮನೆ ದೂರಸ್ತಿಗೆ, ಬಡ ಹೆಣ್ಣು ಮಕ್ಕಳ ಮದುವೆಗೆ, ಕೊರೋನಾದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವರಿಗೆ ಹೀಗೆ ಒಟ್ಟು ರೂ. 18 ಲಕ್ಷದ 10 ಸಾವಿರದಷ್ಟು ಧನ ಸಹಾಯವನ್ನು ನೀದಿರುತ್ತಾರೆ ಎಂದು ಟಿ ಎಂ ಶಹೀದ್ ತೆಕ್ಕಿಲ್ ಸುವರ್ಣ ಸಂಭ್ರಮ ಅಭಿನಂದನ ಸಮಿತಿ ಅಧ್ಯಕ್ಷರಾದ ಸದಾನಂದ ಮಾವಜಿ ಹಾಗು ಕಾರ್ಯದರ್ಶಿ ಕೆ ಟಿ ವಿಶ್ವನಾಥ್ ತಿಳಿಸಿದ್ದಾರೆ.

Sponsors

Related Articles

Back to top button