ಸುಳ್ಯ ಹವ್ಯಕ ವಲಯದ ವತಿಯಿಂದ ಗಣಪತಿ ಹವನ, ಲಲಿತಾ ಹವನ ಹಾಗೂ ದುರ್ಗಾಪೂಜೆ…..

ಸುಳ್ಯ: ಸುಳ್ಯ ಹವ್ಯಕ ವಲಯದ ವತಿಯಿಂದ ಗಣಪತಿ ಹವನ, ಲಲಿತಾ ಹವನ ಹಾಗೂ ದುರ್ಗಾಪೂಜೆ ಕಾರ್ಯಕ್ರಮಗಳನ್ನು ಸುಳ್ಯದ ” ಶಿವ ಕೃಪಾ” ಕಲಾಮಂದಿರದಲ್ಲಿ ಸೆ.29 ರಂದು ನಡೆಸಲಾಯಿತು.
ಡಾ. ನಾರಾಯಣ ಭಟ್ ಕಲ್ಚಾರ್ ಇವರು ಧ್ವಜಾರೋಹಣವನ್ನು ನಡೆಸಿದರು. ವಲಯದ ಕಾರ್ಯದರ್ಶಿಯಾದ ವಿಷ್ಣು ಕಿರಣ ನೀರಬಿದ್ರೆ ಇವರು ಫಲ ಸಮರ್ಪಿಸಿ ಶಂಖನಾದದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.
ವಲಯದ ವತಿಯಿಂದ ದುರ್ಗಾ ಪೂಜೆಯನ್ನು ಡಾ. ನಾರಾಯಣ ಭಟ್ ಕಲ್ಚಾರ್ ದಂಪತಿಗಳು
ಗಣಪತಿ ಹವನ, ಲಲಿತಾ ಹವನವನ್ನು ಕುಂಜತ್ತೋಡಿ ರಮೇಶ್ ಭಟ್ ದಂಪತಿಗಳು ನೆರವೇರಿಸಿದರು.
ವಲಯ ವೈದಿಕ ಪ್ರಧಾನರಾದ ವೇದಮೂರ್ತಿ ಕೃಷ್ಣ ಭಟ್ ಅರಂಬೂರು ಮತ್ತು ಮಂಡಲ ವೈದಿಕ ಪ್ರಧಾನರಾದ ವೆಂಕಟೇಶ ಶಾಸ್ತ್ರಿಗಳ ನೇತೃತ್ವದಲ್ಲಿ ಎಲ್ಲಾ ಕಾರ್ಯಕ್ರಮಗಳು ನೆರವೇರಿದವು. ಮಹಾಮಂಡಳದ ಮಾತೃತ್ವ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಈಶ್ವರಿ ಶ್ಯಾಂ ಭಟ್ ಬೇರ್ಕಡವು ಇವರು ಮಾತೃತ್ವ ವಿಭಾಗದ ಕಾರ್ಯಾಚರಣೆಗಳ ಬಗ್ಗೆ ಮಾಹಿತಿಗಳನ್ನು ನೀಡಿದರು.ವಿಷ್ಣು ಗುಪ್ತ ವಿಶ್ವವಿದ್ಯಾಪೀಠ ಮುಳ್ಳೇರಿಯ ಮಂಡಲದ ನಿರ್ದೇಶಕರಾದ ಪ್ರೊ. ಟಿ. ಶ್ರೀಕೃಷ್ಣ ಭಟ್ ಅವರು ವಿಶ್ವವಿದ್ಯಾಪೀಠ ಬಗ್ಗೆ ಮಾಹಿತಿಗಳನ್ನು ನೀಡಿದರು ಈ ಸಂದರ್ಭದಲ್ಲಿ ಮಂಡಲದ ಮಾತೃ ಪ್ರಧಾನೆ ಕುಸುಮ ಪೆರ್ಮುಖ ಅವರು ಉಪಸ್ಥಿತರಿದ್ದರು.ಸುಮಾರು 75 ಜನ ಗುರು ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀ ಗುರುಗಳ ಮತ್ತು ದೇವರ ಕೃಪೆಗೆ ಪಾತ್ರರಾದರು .ಈ ಸಂದರ್ಭ ಮಾತೃವಿಭಾಗದಿಂದ ಕುಂಕುಮಾರ್ಚನೆ ಮತ್ತು ಕರಾವಲಂಬ ಸ್ತೋತ್ರ ಪಠಣ ನಡೆಯಿತು. ಮಧ್ಯಾಹ್ನ 12.30 ಕ್ಕೆ ಸರಿಯಾಗಿ ಮಹಾಮಂಗಳಾರತಿ ನಡೆದು ಪ್ರಸಾದ ಭೋಜನ ನಡೆಯಿತು. ಭಾರದ್ವಾಜ ಶ್ರಮ ಅರಂಬೂರು ಇದರ ವಿದ್ಯಾರ್ಥಿಗಳೆಲ್ಲ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ವಲಯದ ಎಲ್ಲಾ ಪದಾಧಿಕಾರಿಗಳು, ಗುರಿಕ್ಕಾರರು ಹಾಜರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button