ಸಂಪಾಜೆ ವಿಶೇಷ ಗ್ರಾಮ ಸಭೆ- ಸಾಧಕರಿಗೆ ಸನ್ಮಾನ…
ಸುಳ್ಯ: ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಸಂಪಾಜೆ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಅಧ್ಯಕ್ಷತೆಯಲ್ಲಿ ವಿಶೇಷ ಗ್ರಾಮ ಸಭೆ ನಡೆಯಿತು.
ವಿಶೇಷ ಗ್ರಾಮ ಸಭೆಯಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವು ಪ್ರಶಸ್ತಿ ಮೂಲಕ ಸಮಾಜದಲ್ಲಿ ಗುರುತಿಸಿದ ಯಕ್ಷಗಾನ ಕಲಾವಿದ ಜಯಾನಂದ ಸಂಪಾಜೆ, ksrtc ವಿಭಾಗದಲ್ಲಿ ಉತ್ತಮ ಸೇವೆ ಮಾಡಿದ ಮಹಮದ್ ಕಡೆಪಾಲ, ಸಮಾಜ ಸೇವೆ ಹಾಗೂ ಇನ್ನಿತರ ಚಟುವಟಿಕೆಯಲ್ಲಿ ಗುರುತಿಸಿದ ಯೂಸುಫ್ ಕಲ್ಲುಗುಂಡಿ, ಸಂಸ್ಕೃತಿಕ ಕ್ಷೇತ್ರದಲ್ಲಿ ಕುಮಾರಿ ರೋಸ್ನಿ ನವೀನ್, ನಾಟಿ ವ್ಯೆದ್ಯ ದಿರಾಜ್ ಕಡೆಪಾಲ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕುಮಾರ್ ದಂಡೇಕಜೆ ಅವರಿಗೆ ಸನ್ಮಾನ ಮಾಡಲಾಯಿತು. ಸಾಧನೆ ಮಾಡಿದ ಮಹನೀಯರುಗಳನ್ನು ಸನ್ಮಾನಿಸುವ ಮೂಲಕ ಗ್ರಾಮ ಸಭೆಯನ್ನು ನಡೆಸಲಾಯಿತು. ಪಂಚಾಯತ್ ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಪ್ರಸ್ತಾವನೆ ಸಲ್ಲಿಸಿ ಅಭಿನಂದನಾ ಪತ್ರ ವಾಚಿಸಿದರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸಾ, ಸದಸ್ಯರುಗಳಾದ ಜಗದೀಶ್ ರೈ, ರಜನಿ, ಅಬೂಸಾಲಿ. ಪಿ. ಕೆ. ಹನೀಫ್ ಎಸ್. ಕೆ. ಸವಾದ್ ಗೂನಡ್ಕ, ವಿಮಲಾ ಪ್ರಸಾದ್, ಅನುಪಮಾ, ರಾಜು ನೆಲ್ಲಿಕುಮೆರಿ, ಮಂಜುನಾಥ್, ಕೇಶವ ಬಂಗ್ಲೆಗುಡ್ಡೆ, ಹಮೀದ್ ಎಚ್, ಅಬೂಬಕ್ಕರ್ ಕಡೆಪಾಲ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.