ಮುಲ್ಕಿ – ಉದ್ಯಮಿ ಅಬ್ದುಲ್ ಲತೀಫ್ ಹತ್ಯೆ….

ಮಂಗಳೂರು: ಮೂಡಬಿದ್ರೆಯಲ್ಲಿ ಉದ್ಯಮಿಯಾಗಿರುವ ಅಬ್ದುಲ್ ಲತೀಫ್ ಎಂಬವರು ಇಂದು ಹಾಡು ಹಗಲಲ್ಲೇ ಮುಲ್ಕಿಯಲ್ಲಿ ಹತ್ಯೆಯಾಗಿದ್ದಾರೆ.
ಮೂಡಬಿದ್ರೆಯಲ್ಲಿ ಅಲೈನ್ ಎಂಬ ಜ್ಯುವೆಲ್ಲರಿಯ ಮಾಲಿಕರಾಗಿರುವ ಅಬ್ದುಲ್ ಲತೀಪ್ ಅವರು ಸುಳ್ಯ ತಾಲೂಕು ಮುರುಳ್ಯ ಗ್ರಾಮದ ಕುಕ್ಕಟ್ಟೆಯ ಸುಲೈಮಾನ್ ರವರ ಪುತ್ರ. ಅಬ್ದುಲ್ ಲತೀಪ್ ಅವರು ಮುಲ್ಕಿಯಿಂದ ಮದುವೆಯಾಗಿದ್ದು, ಮೂಡಬಿದ್ರೆಯಲ್ಲಿ ವ್ಯವಹಾರ ನಡೆಸುತ್ತಿದ್ದರು.
ತನ್ನ ಮಾವನ ಮನೆಯವರಿಗೂ ಹಾಗೂ ಅವರ ವಿರೋಧಿಗಳಿಗೂ ನಡೆಯುತ್ತಿದ್ದ ಜಗಳ ಬಿಡಿಸಲು ಮಧ್ಯ ಪ್ರವೇಶಿಸಿದ ಲತೀಫ್ ಅವರಿಗೆ ಕತ್ತಿಯೇಟು ಬಿದ್ದು ಅವರು ಸಾವನ್ನಪ್ಪಿದ್ದಾರೆ ಎಂದು ಕೆಲವು ಮೂಲಗಳಿಂದ ತಿಳಿದುಬಂದರೆ, ಕಾರು ಹಾಗೂ ಬೈಕ್ ನಲ್ಲಿ ಬಂದ ಎಂಟು ಮಂದಿ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಕೊಚ್ಚಿ ಲತೀಫ್ ಅವರನ್ನು ಕೊಲೆಗೈದಿದ್ದಾರೆ. ಹಣಕಾಸಿನ ವಿವಾದ ಈ ಕೊಲೆಗೆ ಕಾರಣ ಎಂದು ಇನ್ನು ಕೆಲವು ಮೂಲಗಳಿಂದ ತಿಳಿದುಬಂದಿದೆ. ಮುಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG 20200605 WA0004 249x300

Related Articles

Leave a Reply

Your email address will not be published. Required fields are marked *