ಶುಕ್ರವಾರ – ದ.ಕ ಜಿಲ್ಲೆಯಲ್ಲಿ 8, ಉಡುಪಿಯಲ್ಲಿ 204, ಕಾಸರಗೋಡಿನಲ್ಲಿ 1 ಕೊರೊನಾ ಪಾಸಿಟಿವ್…
ಮಂಗಳೂರು: ಇಂದು (ಶುಕ್ರವಾರ) ದ.ಕ ಜಿಲ್ಲೆಯಲ್ಲಿ 8, ಉಡುಪಿಯಲ್ಲಿ 204, ಕಾಸರಗೋಡಿನಲ್ಲಿ 1 ಕೊರೊನಾ ಪ್ರಕರಣ ವರದಿಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ 8 ಪಾಸಿಟಿವ್ ಪ್ರಕರಣಗಲ್ಲಿ 7 ಪ್ರಕರಣ ಮಹಾರಾಷ್ಟ್ರದಿಂದ ಮರಳಿದವರಾಗಿದ್ದರೆ, ಇನ್ನೂ ಒಬ್ಬ ವ್ಯಕ್ತಿಯ ಸೋಂಕಿನ ಮೂಲವನ್ನು ಕಂಡುಹಿಡಿಯಲಾಗಿಲ್ಲ.
ಉಡುಪಿಯ 204 ಪ್ರಕರಣಗಳಲ್ಲಿ 203 ಜನರು ಮಹಾರಾಷ್ಟ್ರದಿಂದ ಬಂದವರಾಗಿದ್ದರೆ, ಓರ್ವರು ಚೆಕ್ ಪೋಸ್ಟ್ ನಲ್ಲಿ ಕಾರ್ಯನಿರ್ವಹಿಸಿದ್ದ ಪೊಲೀಸ್ ಸಿಬ್ಬಂದಿಗೆ ಸೋಂಕು ದೃಢವಾಗಿದೆ.
ಕಾಸರಗೋಡಿನಲ್ಲಿ ಮಹಾರಾಷ್ಟ್ರದಿಂದ ಆಗಮಿಸಿದ್ದ ಪಡನ್ನ ಗ್ರಾಮಪಂಚಾಯತ್ ನಿವಾಸಿ 39 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿದೆ.
ಇನ್ನು ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 515 ಪ್ರಕರಣಗಳು ವರದಿಯಾಗಿವೆ. ಈ ಪೈಕಿ 482 ಮಂದಿ ಅಂತಾರಾಜ್ಯ ಪ್ರಯಾಣದ ಇತಿಹಾಸ ಹೊಂದಿದ್ದು, 472 ಜನರು ಮಹಾರಾಷ್ಟ್ರದಿಂದ ಆಗಮಿಸಿದ್ದಾರೆ. ಓರ್ವ ವ್ಯಕ್ತಿ ಅಂತಾರಾಷ್ಟ್ರೀಯ ಪ್ರಯಾಣದಿಂದ ಹಿಂದಿರುಗಿದ್ದಾರೆ. ಇದರಿಂದ ರಾಜ್ಯದಲ್ಲಿ ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 4835ಕ್ಕೇರಿಕೆಯಾಗಿದೆ.
ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು 204 ಪ್ರಕರಣಗಳು ಕಂಡುಬಂದಿದ್ದು,ಯಾದಗಿರಿ -74, ವಿಜಯಪುರ -53, ಕಲಬುರಗಿ- 42, ಬೀದರ್ -39, ಬೆಳಗಾವಿ -36, ಮಂಡ್ಯ -13, ಬೆಂಗಳೂರು ನಗರ- 10, ಬೆಂಗಳೂರು ಗ್ರಾಂ-12, ದಕ್ಷಿಣ ಕನ್ನಡ-08, ಉತ್ತರ ಕನ್ನಡ-07, ಹಾಸನ-03, ಚಿಕ್ಕಬಳ್ಳಾಪುರ-03, ಧಾರವಾಡ-03,ರಾಮನಗರ-02, ದಾವಣಗೆರೆ-01, ಬಾಗಲಕೋಟೆ-01, ಬಳ್ಳಾರಿ -01, ಶಿವಮೊಗ್ಗ, ಚಿತ್ರದುರ್ಗ, ಗದಗ, ತುಮಕೂರು, ರಾಯಚೂರು, ಹಾಗೂ ಕೊಪ್ಪಳ, ಚಿಕ್ಕಮಗಳೂರು, ಕೊಡಗಿನಲ್ಲಿ ಯಾವುದೇ ಪ್ರಕರಣ ಪತ್ತೆಯಾಗಿಲ್ಲ.