ಶ್ರೀ ಜುಮಾದಿ ಬಂಟ ದೈವಸ್ಥಾನ – ನವೀಕರಣ ಪುನಃಪ್ರತಿಷ್ಠೆ…

ಬಂಟ್ವಾಳ : ಸಜಿಪ ಮಾಗಣೆ ಶ್ರೀ ಜುಮಾದಿ ಬಂಟ ದೈವಸ್ಥಾನ ಬೆಂಕ್ಯ ಕಲ್ಲಾಡಿಕೋಳಿ ಸಜಿಪಮೂಡ ನೂತನವಾಗಿ ಶಿಲಾಮಯ ದೈವಸ್ಥಾನ ನಿರ್ಮಾಣಗೊಂಡು ಎ. 24 ರಂದು ಬ್ರಹ್ಮಶ್ರೀ ನೀಲೇಶ್ವರ ಕೆ ಉಚ್ಚಿಲತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನವೀಕರಣ ಪುನಃಪ್ರತಿಷ್ಠೆ ಸಾನಿಧ್ಯ ಕಲಶಾಭಿಷೇಕ ಪರ್ವಸೇವೆ ಶ್ರದ್ಧಾಭಕ್ತಿಯಿಂದ ಜರುಗಿತು.
ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಕಾಂತಾಡಿಗುತ್ತು ಗಡಿ ಪ್ರಧಾನರಾದ ಉಗ್ಗ ಶೆಟ್ಟಿ ,ಗಣೇಶ್ ನಾಯಕ್, ಚಂದ್ರಶೇಖರ ನಾಯಕ್, ರವಿಶಂಕರ್ ಐತಾಳ, ಕಸ್ತೂರಿ ಐತಾಳ, ದೇವಿಪ್ರಸಾದ ಪೂಂಜಾ, ಶಿವಪ್ರಸಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.