ಬೆಳ್ತಂಗಡಿ ಕಾಂಗ್ರೆಸ್ ಕಾರ್ಯಕರ್ತರ ಕ್ಷೇತ್ರವಾರು ಸಭೆ…

ಬೆಳ್ತಂಗಡಿ:ವಿಧಾನ ಪರಿಷತ್ತಿನ ಸದಸ್ಯರಾದ ಮಂಜುನಾಥ ಭಂಡಾರಿಯವರು ಬೆಳ್ತಂಗಡಿ (ನಗರ) ಕ್ಷೇತ್ರದ ನಾರಾವಿ, ಅಳದಂಗಡಿ, ಕುವೆಟ್ಟು, ಕಣಿಯೂರು ಜಿಲ್ಲಾ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಕ್ಷದಲ್ಲಿ ಸ್ಪರ್ಧಿಸಿದ್ದ ಪ್ರತಿನಿಧಿಗಳು , ಪಕ್ಷದ ಮುಖ್ಯ ಕಾರ್ಯಕರ್ತರು , ನಾಯಕರುಗಳು, ಮಾಜಿ ಜಿಲ್ಲಾ, ತಾಲೂಕು ಮತ್ತು ಗ್ರಾಮ ಪಂಚಾಯಿತಿ ಸದಸ್ಯರುಗಳ ಜೊತೆ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದರು.
ಪಂಚಾಯತ್ ಗೆ ಸಂಬಂಧಪಟ್ಟ ಅನುದಾನ, ಜಮೀನು ಸಮಸ್ಯೆ, 9 /11, ಅಧಿಕಾರ ಮೊಟಕು ಗೊಳಿಸುತ್ತಿರುವ ಬಗ್ಗೆ ಇತ್ಯಾದಿ ದೂರುಗಳನ್ನು ಆಲಿಸಿದ ಭಂಡಾರಿಯವರು ಸಂಬಂಧ ಪಟ್ಟವರಲ್ಲಿ ಚರ್ಚಿಸುವುದಾಗಿ ತಿಳಿಸಿದರು. ಪಂಚಾಯತ್ ರಾಜ್ ಸಂಘಟನೆ ಯನ್ನು ಗ್ರಾಮ ಮಟ್ಟದಲ್ಲಿ ಬಲಪಡಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್ , ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಚಾಲಕರಾದ ಸುಭಾಷ್ಚಂದ್ರ ಶೆಟ್ಟಿ ಕೊಳ್ನಾಡು, ಬೆಳ್ತಂಗಡಿ ಬ್ಲಾಕ್‌ (ನಗರ) ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್ ಕುರ್ತೋಡಿ , ಬೆಳ್ತಂಗಡಿ ಬ್ಲಾಕ್‌ (ಗ್ರಾಮೀಣ) ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ರಂಜನ್ ಜಿ. ಗೌಡ ರವರು, ಜಿಲ್ಲಾ ಸೇವಾದಳದ ಅಧ್ಯಕ್ಷರಾದ ಜೋಕಿಂ ಲೋಬೋ, ರಾಮಚಂದ್ರ ಗೌಡ, ಬೆಳ್ತಂಗಡಿ ಯುವ ಕಾಂಗ್ರೆಸ್ಸಿನ ಅಧ್ಯಕ್ಷರಾದ ಅಬಿನಂಧನ್ ಹರೀಶ್ ಕುಮಾರ್, ಬೆಳ್ತಂಗಡಿ ಮಹಿಳಾ ಕಾಂಗ್ರೆಸ್ಸಿನ ಅಧ್ಯಕ್ಷರಾದ ವಂದನಾ ಭಂಡಾರಿ ನಾರಾವಿ ಇತರರು ಉಪಸ್ಥಿತರಿದ್ದರು.

IMG 20220426 WA0001 300x135 IMG 20220426 WA0006 300x135 IMG 20220426 WA0005 1 300x135 IMG 20220426 WA0003 300x135

IMG 20220426 WA0007 300x135

Related Articles