ಮಕ್ಕಳ ಶಿಬಿರಗಳಿಂದ ಜ್ಞಾನ ವಿಕಾಸ – ಡಾ. ಗೋವರ್ಧನ್ ರಾವ್…
ಬಂಟ್ವಾಳ: ಮಕ್ಕಳಿಗೆ ಸತ್ಸಂಗ ಮತ್ತು ಸಮಯ ಪ್ರಜ್ಞೆಯನ್ನು ಕಲಿಸುವುದುರಿಂದ ಉತ್ತಮ ಸಮಾಜ ನಿರ್ಮಾಣವಾಗುವುದು. ಮಕ್ಕಳ ಪ್ರತಿಭೆಗಳಿಗೆ ಅನುಕೂಲವಾಗುವಂತೆ ಮಕ್ಕಳ ಶಿಬಿರಗಳನ್ನು ಏರ್ಪಡಿಸಿದರೆ ಜ್ಞಾನ ವಿಕಾಸಕ್ಕೆ ಅನುಕೂಲವಾಗುವುದು ಎಂದು ಸೂರ್ಯವಂಶ ಪೌಂಡೇಶನ್ ಬಿ.ಸಿ.ರೋಡು ಇದರ ಅಧ್ಯಕ್ಷ ಡಾ. ಗೋವರ್ಧನ್ ರಾವ್ ಹೇಳಿದರು.
ಅವರು ಕಳ್ಳಿಗೆ ಜಾರಂದ ಗುಡ್ಡೆಯಲ್ಲಿ ಬಂಟ್ವಾಳ ನೇತ್ರಾವತಿ ಸಂಗಮ ಮತ್ತು ಶ್ರೀ ಲಕ್ಷ್ಮೀ ವಿಷ್ಣು ಸೇವಾ ಸಂಘ ಏರ್ಪಡಿಸಿದ ಐದು ದಿನಗಳ ಚಿಣ್ಣರ ಬೇಸಿಗೆ ಶಿಬಿರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಸದಾಶಿವ ಡಿ ತುಂಬೆ ಶಿಬಿರವನ್ನು ಉದ್ಘಾಟಿಸಿದರು. ಎಸ್.ಸಿ.ಐ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಕಳ್ಳಿಗೆ ಗ್ರಾ.ಪಂ ಅಧ್ಯಕ್ಷ ಯಶೋಧ ದಯಾನಂದ , ಉದ್ಯಮಿ ಮೂಸಾ ಹಾಜಿ ಚೆರೂರು ಕಾಸರಗೋಡು, ಉಮಾಶಂಕರ್ ಅಮೀನ್ ಜಾರಂದಗುಡ್ಡೆ, ಪಿ.ಎ.ರಹೀಂ ಶುಭ ಹಾರೈಸಿದರು. ದೇವಿಪ್ರಸಾದ್ ದೇವಂದಬೆಟ್ಟು ಸ್ವಾಗತಿಸಿದರು. ಸುಧೀರ್ ವಂದಿಸಿದರು. ಶುಭ ಆನಂದ ಬಂಜನ್, ಪಿ. ಮಹಮ್ಮದ್, ಶಿಕ್ಷಕ ರಮೇಶ್ ಉಳಯ ಮಕ್ಕಳಿಗೆ ವಿವಿಧ ಚಟುವಟಿಕೆಗಳ ಮೂಲಕ ತರಬೇತಿ ನೀಡಿದರು. ಡಾ. ವಾರಿಜ ನಿರ್ಬೈಲು ದೇಶ ಭಕ್ತಿಗೀತೆ ಹೇಳಿಸಿದರು.