“ಮಧುಪ್ರಪಂಚ” ಸಂಪಾದಕ ಪೆರಾಜೆಗೆ ಸನ್ಮಾನ…

ಪುತ್ತೂರು: ದ.ಕ. ಜಿಲ್ಲಾ ಜೇನು ವ್ಯವಸಾಯಗಾರರ ಸಹಕಾರಿ ಸಂಘದ ವತಿಯಿಂದ ಪುತ್ತೂರು ಮಾಧುರಿ ಸಭಾಂಗಣದಲ್ಲಿ ಮಧುಪ್ರಪಂಚ ಪತ್ರಿಕೆಯ ಸಂಪಾದಕರಾದ ಹಿರಿಯ ಪತ್ರಕರ್ತ ಜಯಾನಂದ ಪೆರಾಜೆಯವರನ್ನು ಸನ್ಮಾನಿಸಲಾಯಿತು.
ಸಂಘದ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷರಾದ ಚಂದ್ರ ಕೋಲ್ಚಾರ್ ಅಭಿನಂದನಾ ಭಾಷಣ ಮಾಡಿದರು. ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಶುಭಾಶಂಸನೆ ಮಾಡಿದರು. ನಿರ್ದೇಶಕರಾದ ಜಿ.ಪಿ.ಶ್ಯಾಮ ಭಟ್, ಶಿವಾನಂದ, ಮನಮೋಹನ ಎ., ಜನಾರ್ದನ ಚೂಂತಾರು,ಡಿ.ತನಿಯಪ್ಪ, ಶ್ರೀಶ ಕೊಡವೂರು ,ಹೆಚ್.ಸುಂದರ ಗೌಡ, ಇಂದಿರಾ ಕೆ.,ಹರೀಶ ಕೋಡ್ಲ, ಪಾಂಡುರಂಗ ಹೆಗ್ಗಡೆ,ಪುರುಶೋತ್ತಮ ಭಟ್, ಪುಟ್ಟಣ್ಣ ಗೌಡ,ಗೋವಿಂದ ಭಟ್,ವ್ಯವಸ್ಥಾಪನಾ ನಿರ್ದೇಶಕ ತಿಮ್ಮಯ್ಯ ಪಿ.ಉಪಸ್ಥಿತರಿದ್ದರು.

Related Articles

Back to top button