ಗೂನಡ್ಕ- ಕಾಲುಸಂಕದ ಮೇಲೆ ಬಿದ್ದ ಅಪಾಯಕಾರಿ ಮರ ತೆರವು…

ಸುಳ್ಯ: ಸಂಪಾಜೆ ಗ್ರಾಮದ ಗೂನಡ್ಕ ಪೇರಡ್ಕ ಸಂಪರ್ಕ ಕಲ್ಪಿಸುವ ಕಾಲು ದಾರಿಯಲ್ಲಿ ಗೂನಡ್ಕ ಕಾಲುಸಂಕದ ಮೇಲೆ ಗಾಳಿಗೆ ಬಿದ್ದ ಅಪಾಯಕಾರಿ ಮರವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ವಿಪತ್ತು ತಂಡದ ಸದಸ್ಯರುಗಳಾದ ಚಿದಾನಂದ ಮೂಡನಕಜೆ , ಗಂಗಾಧರ್, ಚೇತನ, ಆನಂದ, ಸುದೀಶ್, ಲಕ್ಷ್ಮಿ ನಾರಾಯಣ, ಜಯರಾಮ, ತೇಜಪ್ರಸಾದ್, ಪ್ರಸನ್ನ ರವರು ತೆರವು ಗೊಳಿಸಿ ಸಾರ್ವಜನಿಕರಿಗೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ, ಸದಸ್ಯರುಗಳಾದ ಅಬುಸಾಲಿ ಪಿ. ಕೆ., ಹನೀಫ್ ಎಸ್. ಕೆ., ಉನೈಸ್ ಗೂನಡ್ಕ, ಉಬೈಸ್ ಗೂನಡ್ಕ ಉಪಸ್ಥಿತರಿದ್ದರು.