ಸುಳ್ಯ ವಿಖಾಯ ತಂಡದಿಂದ ಕಲ್ಲುಗುಂಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ…

ಸುಳ್ಯ: ಸುಳ್ಯ ವಲಯ ವಿಖಾಯ ತಂಡ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ಸಂಪಾಜೆ ಗ್ರಾಮದ ಕಲ್ಲುಗುಂಡಿ ಪೇಟೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ದುಹಾ ಮೂಲಕ ಚಾಲನೆ ನೀಡಿದ ಕಲ್ಲುಗುಂಡಿ ಜುಮಾ ಮಸೀದಿಯ ಖತೀಬ್ ರಾದ ನಯೀಮ್ ಫೈಝಿ ಮುಖ್ವೆ,ಸ್ವಚ್ಛತೆ ಇಸ್ಲಾಮಿನ ಬಾಗವಾಗಿದೆ ಎಂದರು.
ಕಲ್ಲುಗುಂಡಿ ಜುಮಾ ಮಸೀದಿಯ ಅಧ್ಯಕ್ಷರಾದ ಅಬ್ಬಾಸ್ ಸೆಂಟಿಯಾರ್ ಮಾತನಾಡಿ ವಿಖಾಯ ತಂಡವು ಜಿಲ್ಲೆಯಲ್ಲಿ ಮಾಡುತ್ತಿರುವ ಸೇವೆಯ ಕುರಿತು ವಿವರಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಸುಳ್ಯ ಸುನ್ನಿ ಮಹಲ್ ಫೆಡರೇಷನ್ ಅಧ್ಯಕ್ಷರಾದ ಖತ್ತರ್ ಇಬ್ರಾಹಿಂ ಹಾಜಿ,ಸುಳ್ಯ ಮದ್ರಸಾ ಮೆನೇಜ್ಮೆಂಟ್ ಅಧ್ಯಕ್ಷರಾದ ತಾಜ್ ಮಹಮ್ಮದ್ ಸಂಪಾಜೆ, ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ. ಹಮೀದ್, ಸದಸ್ಯರಾದ ಎಸ್. ಕೆ. ಹನೀಫ್, ಸವಾದ್ ಗೂನಡ್ಕ,ಅಬೂಸಾಲಿ ಗೂನಡ್ಕ ,ಜಗದೀಶ್ ರೈ ಉಪಸ್ಥಿತರಿದ್ದರು.
ನಂತರ ಕಲ್ಲುಗುಂಡಿ ಮಸೀದಿ ಬಳಿಯಿಂದ ಕೂಲಿಶೆಡ್ ಆಗಿ ಚರ್ಚ್ ವರೆಗೆ ರಸ್ತೆಯ ಎರಡೂ ಕಡೆ ಚರಂಡಿ ಶುಚಿಗೊಳಿಸಲಾಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಲಿಸ್ಸಿ ಮೊನಾಲಿಸ ಕಾರ್ಯಕ್ರಮದಲ್ಲಿ ಭಾಗಿಯಾದರು.
ಎಸ್ಆ.ಲಿ ಹಾಜಿಯವರ ವತಿಯಿಂದ ಮದ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಅಜ್ಜಾವರ,ಮಂಡೆಕೋಲು, ಸುಣ್ಣಮೂಲೆ, ಎಲಿಮಲೆ,ಸುಳ್ಯ, ಗೂನಡ್ಕದ ವಿಖಾಯ ಕಾರ್ಯಕರ್ತರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related Articles

Back to top button