ಪೇರಡ್ಕ- ಮಾಸಿಕ ದಿಕ್ರ್ ಸ್ವಲಾತ್ ಮಜಿಲಿಸ್…

ಸುಳ್ಯ: ಮುಹಿದ್ದೀನ್ ಜುಮಾ ಮಸ್ಜಿದ್ ವಲಿಯುಲ್ಲಾಹಿ ದರ್ಗಾ ಶರೀಫ್ ಪೇರಡ್ಕ – ಗೂನಡ್ಕ ಇದರ ಆಶ್ರಯದಲ್ಲಿ ಮಾಸಿಕ ದಿಕ್ರ್ ಸ್ವಲಾತ್ ಮಜಲಿಸ್ ಫೆಬ್ರವರಿ 6 ರಂದು ಬಹು| ಎನ್ ಪಿ ಯಂ ಅಸ್ಸಯ್ಯದ್ ಫಝಲ್ ಹಮೀದ್ ಕೊಯಮ್ಮ ತಂಙಳ್ ರವರ ನೇತೃತ್ವದಲ್ಲಿ ನಡೆಯಿತು.
ಅವರು ಉಪನ್ಯಾಸವನ್ನು ನೀಡುತ್ತಾ ಸಮಯವು ಈಗ ಅಮೂಲ್ಯ ಆದುದರಿಂದ ತಮ್ಮ ಸಮಯವನ್ನು ವ್ಯರ್ಥ ಮಾಡದೆ ದೇವರ ಅರಾಧನೆಗೆ ಮೀಸಲಿಡಬೇಕು ಇನ್ನು ಬರುವಂತಹ ರಜಬ್, ಶಾಬಾನ್, ರಂಜಾನ್ ತಿಂಗಳು ಪವಿತ್ರವಾದ ತಿಂಗಳು, ಆದುದರಿಂದ ತಾವುಗಳು ಇಂತಹ ದಿಕ್ರ್ ಸ್ವಲಾತ್ ಮಜಲಿಸ್ ನಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪುನೀತರಾಗಿ ಎಂದರು.
ಸ್ಥಳೀಯ ಖತೀಬರಾದ ರಿಯಾಝ್ ಫೈಝಿ ಎಮ್ಮೆಮಾಡು ದುವಾ ನೆರವೇರಿಸಿದರು. ನೂರುದ್ಧೀನ್ ಅನ್ಸಾರಿ, ಸಾಜಿದ್ ಅಝಹರಿ, ಮುಹಿದ್ಧೀನ್, ಜುಮಾ ಮಸೀದಿ ಗೌರವಾಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಅಧ್ಯಕ್ಷರಾದ ಅಲಿಹಾಜಿ, ಕಾರ್ಯದರ್ಶಿ ಅಬ್ದುಲ್ ರಜಾಕ್ ತೆಕ್ಕಿಲ್, ಪಿ.ಕೆ. ಉಮ್ಮರ್ ಗೂನಡ್ಕ, ಗ್ರಾ.ಪಂ. ಅಧ್ಯಕ್ಷ ಜಿ.ಕೆ.ಹಮೀದ್. ಅರಂತೋಡು ಜುಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ, ಗೂನಡ್ಕದ ಎಸ್.ಕೆ.ಎಸ್.ಎಸ್.ಎಫ್ ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ಮೊಟ್ಟೆಂಗಾರ್, ಮೊಯಿದು ದರ್ಖಾಸ್ತು, ಇಬ್ರಾಹಿಂ ಚೆರೂರು, ಟಿ.ಎ.ಮಹಮ್ಮದ್ ಕುಂಞ ತೆಕ್ಕಿಲ್ ಪೇರಡ್ಕ, ಮಹಮ್ಮದ್ ಕುಂಞ ಕಲ್ನಾಡ್, ಟಿ.ಬಿ. ಹನೀಫ್, ಇಬ್ರಾಹಿಂ ಸೆಟ್ಯಡ್ಕ, ಇಕ್ಬಾಲ್ ಚೆರೂರು, ಬಶೀರ್ ಬೆಳ್ಳಾರೆ, ಹಕೀಮ್ ಮೊಟ್ಟೆಂಗಾರ್, ಕೆ. ಎಂ.ಮೂಸಾನ್, ಅಶ್ರಫ್ ಪೇರಡ್ಕ, ನ್ಯಾಯವಾದಿ ಸಲೀಮ್, ಕೆ.ಎಂ.ಉಸ್ಮಾನ್, ಹನೀಫ್ ಮೊಟ್ಟೆಂಗಾರ್, ಇರ್ಷಾದ್ ಪೇರಡ್ಕ, ಹಾಗೂ ಊರವರು ಉಪಸ್ಥಿತರಿದ್ದರು.

Related Articles

Back to top button