ಮಾ. 15 ಕ್ಕೆ ಸುಳ್ಯಕ್ಕೆ ನಂದಿ ರಥಯಾತ್ರೆ – ಅದ್ದೂರಿ ಸ್ವಾಗತಕ್ಕೆ ಸಂಘಟಕರ ತೀರ್ಮಾನ…
ಗೋವು ಮತ್ತು ಕೃಷಿಗೆ ಭಾವನಾತ್ಮಕ ಸಂಬಂಧವಿದೆ, ಅದನ್ನು ಸಮಾಜಕ್ಕೆ ತಿಳಿಸುವುದೇ ನಂದಿ ಯಾತ್ರೆ ಉದ್ದೇಶ- ಅಕ್ಷಯ್ ಕೆ.ಸಿ...

ಸುಳ್ಯ: ನಂದಿ (ಗೋವು) ಬಗ್ಗೆ ಹಾಗೂ ಅದರ ಉತ್ಪನ್ನದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ ನಂದಿ ರಥಯಾತ್ರೆ ನಡೆಯುತ್ತಿದ್ದು ಮಾ.15ರಂದು ಸುಳ್ಯಕ್ಕೆ ನಂದಿ ರಥಯಾತ್ರೆ ಪುರಪ್ರವೇಶ ಮಾಡಲಿದ್ದು ಈ ಪುಣ್ಯ ಕಾರ್ಯದಲ್ಲಿ ಸಮಾಜ ಬಂಧುಗಳು ಭಾಗವಹಿಸಬೇಕು ಎಂದು ನಂದಿ ರಥಯಾತ್ರೆಯ ಸುಳ್ಯ ತಾಲೂಕಿನ ಸ್ವಾಗತ ಸಮಿತಿ ಅಧ್ಯಕ್ಷ, ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿರಾಗಿರುವ ಅಕ್ಷಯ್ ಕೆ.ಸಿ. ಹೇಳಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಗೋ ಸೇವಾ ಗತಿನಿಧಿ ಕರ್ನಾಟಕ, ರಾಧ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ಇವರ ಸಹಯೋಗದೊಂದಿಗೆ ನಂದಿ ರಥಯಾತ್ರೆ ನಡೆಯುತ್ತಿದೆ.ಮಾ.15 ದಂದು ಬೆಳಗ್ಗೆ ಸುಬ್ರಹ್ಮಣ್ಯದಿಂದ ರಥಯಾತ್ರೆ ಸುಳ್ಯದತ್ತ ಹೊರಡಲಿದೆ. ಮಧ್ಯಾಹ್ನದ ವೇಳೆ ಎಲಿಮಲೆಗೆ ರಥಯಾತ್ರೆ ತಲುಪಲಿದ್ದು, ಅಲ್ಲಿವಿಶ್ರಾಂತಿಯ ಬಳಿಕ ಮಧ್ಯಾಹ್ನ 3.30ಕ್ಕೆ ಸುಳ್ಯ ತಲುಪುವುದು. ಸುಳ್ಯ ಜ್ಯೋತಿ ಸರ್ಕಲ್ ಬಳಿಯಲ್ಲಿ ಸಾವಿರಾರು ಮಂದಿ ಸೇರಿ ನಂದಿ ರಥಯಾತ್ರೆಯನ್ನು ಅದ್ದೂರಿಯಾಗಿ ಸ್ವಾಗತಿಸಲಿದ್ದಾರೆ. ಬಳಿಕ ಮೆರವಣಿಗೆಯಲ್ಲಿ ರಥಯಾತ್ರೆಯನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗಕ್ಕೆ ಬರಮಾಡಿಕೊಳ್ಳಲಾಗುವುದು. ಅಲ್ಲಿ ಸಭಾ ಕಾರ್ಯಕ್ರಮ ನಡೆಯುವುದು. ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ ನ ಅಧ್ಯಕ್ಷರಾದ ಭಕ್ತಿಭೂಷನ್ ದಾಸ್ ಹಾಗೂ ಬಂಟ್ವಾಳ ಶಾಸಕರಾದ ರಾಜೇಶ್ ನಾಕ್ ಉಳಿಪಾಡಿ ಒಡ್ಡೂರು ಫಾರ್ಮ್ ರವರು ನಂದಿಯ ಮಹತ್ವದ ಕುರಿತು ಮಾತನಾಡಲಿದ್ದು ಗೋವು ಮತ್ತು ಕೃಷಿ ನಮ್ಮ ಬದುಕಿನ ಭಾಗವಾಗಿದ್ದು ಅದಕ್ಕೊಂದು ಭಾವನಾತ್ಮಕ,ದೈವಿಕ ಶಕ್ತಿಯಿದೆ ಈ ನಿಟ್ಟಿನಲ್ಲಿ ಇಂತಹ ವಿಚಾರಗಳನ್ನು ಯುವಕರು ತಿಳಿದುಕೊಳ್ಳುವ ಅವಶ್ಯಕತೆಯಿದ್ದು ತಾಲೂಕಿನ ಜನತೆ ಈ ಪುಣ್ಯ ಕಾರ್ಯದಲ್ಲಿ ಭಾಗವಹಿಸುವಂತೆ ತಿಳಿಸಿದರು.
ಕಾರ್ಯಕ್ರಮದ ಸಂಚಾಲಕ ರಾಜೇಶ್ ಮೇನಾಲ ಅವರು ಮಾತನಾಡಿ, ಪಂಚ ಪರಿವರ್ತನೆ ಎಂಬ ವಿಚಾರದಲ್ಲಿ ಈ ಬಾರಿ ಸಂಘ ಕೆಲಸ ಮಾಡುತ್ತಿದೆ. ಮುಖ್ಯವಾಗಿ ಸ್ವದೇಶಿ ವಿಚಾರಕ್ಕೆ ಒತ್ತು ನೀಡುವ ಕಾರ್ಯ. ನಂದಿ ನಮಗೆ ಅತ್ಯಂತ ಪೂಜನೀಯ ಈ ಕಾರ್ಯದಲ್ಲಿ ಎಲ್ಲರೂ ಭಾಗವಹಿಸುವಂತಾಗಬೇಕು. ರಥಯಾತ್ರೆ ಸಾಗುವ ದಾರಿಯುದ್ಧಕ್ಕೂ ನಂದಿಪೂಜೆ ಮಾಡಲು ಅವಕಾಶ ಕಲ್ಪಿಸಲಿದೆ ತಿಳಿಸಿದರು.
ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಡಿ.ಪಿ., ವಿಕ್ರಮ್ ಅಡ್ಪಂಗಾಯ, ಸಂಚಾಲಕ ಅವಿನಾಶ್ ಡಿ.ಕೆ., ಉಪಾಧ್ಯಕ್ಷರುಗಳಾದ ದೇವರಾಜ್ ಆಳ್ವ, ಎ.ಟಿ.ಕುಸುಮಾಧರ್, ರಜತ್ ಅಡ್ಕಾರು, ಬುದ್ದ ನಾಯ್ಕ್, ರಮೇಶ್ ಇರಂತಮಜಲು, ತೀರ್ಥೇಶ್ ಪಾರೆಪ್ಪಾಡಿ ಉಪಸ್ಥಿತರಿದ್ದರು.