ವಿವೇಕಾನಂದ ಎಂಜಿನಿಯರಿಂಗ್ ಕಾಲೇಜು – ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ…

ಪುತ್ತೂರು: ಪುತ್ತೂರಿನ ವಿವೇಕಾನಂದ ಕಾಲೇಜ್ ಆಫ್ ಎಂಜಿನಿಯರಿಂಗ್ ಎಂಡ್ ಟೆಕ್ನಾಲಜಿಯ ಪುರುಷರ ವಾಲಿಬಾಲ್ ತಂಡವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಮಂಗಳೂರು ವಿಭಾಗ ಮಟ್ಟದ ಅಂತರ್ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.
ಉಡುಪಿ ಬಂಟಕಲ್ಲಿನ ಎಸ್‍ಎಂವಿಐಟಿಎಂ ನಲ್ಲಿ ನಡೆದ ಈ ಕ್ರೀಡಾಕೂಟದಲ್ಲಿ ಕಾಲೇಜಿನ ತಂಡವು ಉತ್ತಮ ಸಾಧನೆಯೊಂದಿಗೆ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದೆ. ಮಂಗಳೂರು ವಿಭಾಗ ಮಟ್ಟದ ವಿವಿಧ ಇಂಜಿನಿಯರಿಂಗ್ ಕಾಲೇಜಿನ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದವು.
ಅಂತಿಮ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ಸುಜನ್.ಪಿ, ದ್ವಿತೀಯ ಕಂಪ್ಯೂಟರ್ ಸೈನ್ಸ್ ವೀಭಾಗದ ಅಖಿಲೇಶ್, ತೃತೀಯ ಮೆಕ್ಯಾನಿಕಲ್ ವಿಭಾಗದ ಪವಿತ್, ಅಂತಿಮ ಡಾಟಾ ಸೈನ್ಸ್ ವಿಭಾಗದ ಪ್ರಣಾಮ್, ತೃತೀಯ ಸಿವಿಲ್ ವಿಭಾಗದ ರಕ್ಷಿತ್‍ರಾಜ್, ದ್ವಿತೀಯ ಎಲೆಕ್ಟ್ರಾನಿಕ್ಸ್ ವಿಭಾಗದ ಜೀವನ್, ಅಂತಿಮ ವರ್ಷದ ಮೆಕ್ಯಾನಿಕಲ್ ವಿಭಾಗದ ಭವಿಶ್ಯತ್, ದ್ವಿತೀಯ ಡಾಟಾ ಸೈನ್ಸ್ ವಿಭಾಗದ ಭುವನ್ ಕುಮಾರ್.ಎ.ಸಿ, ತೃತೀಯ ಸಿವಿಲ್ ವಿಭಾಗದ ಸಂದೀಪ್, ದ್ವಿತೀಯ ಮೆಕ್ಯಾನಿಕಲ್ ವಿಭಾಗದ ಯಶಸ್ ಹಾಗೂ ಗೌರವ್.ಎಸ್.ಜಿ ಮತ್ತು ತೃತೀಯ ಡಾಟಾ ಸೈನ್ಸ್ ವಿಭಾಗದ ಮನೋಹರ ವಿಜೇತ ತಂಡದ ಆಟಗಾರರಾಗಿದ್ದಾರೆ.
ವಿಜೇತ ತಂಡಕ್ಕೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಬಾಲಚಂದ್ರ ಗೌಡ ಭಾರ್ತಿಕುಮೇರು ಮಾರ್ಗದರ್ಶನವನ್ನು ನೀಡಿದ್ದಾರೆ ಎಂದು ಪ್ರಾಂಶುಪಾಲ ಡಾ.ಮಹೇಶ್‍ಪ್ರಸನ್ನ.ಕೆ ತಿಳಿಸಿದ್ದಾರೆ.

volleyeball zonal 2025 (1)

Sponsors

Related Articles

Back to top button