ಸುಳ್ಯ ಎಸಿಎಫ್ ಆಗಿ ಪ್ರವೀಣ್‌ ಕುಮಾರ್‌ ಶೆಟ್ಟಿ ಅಧಿಕಾರ ಸ್ವೀಕಾರ…

ಸುಳ್ಯ: ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಪ್ರವೀಣ್‌ ಕುಮಾರ್‌ ಶೆಟ್ಟಿ ಅವರನ್ನು ನೇಮಕಗೊಳಿಸಿ
ಸರಕಾರ ಆದೇಶ ಮಾಡಿದೆ.ಅವರು ಅ. 11 ರಂದು ಅಧಿಕಾರ ಸ್ವೀಕರಿಸಿದ್ದಾರೆ.
ಪ್ರವೀಣ್‌ ಕುಮಾರ್‌ ಶೆಟ್ಟಿ ಅವರು ದ ಕ ಜಿಲ್ಲಾ ಸಾಮಾಜಿಕ ಅರಣ್ಯ ಇಲಾಖೆಯಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕರ್ತವ್ಯದಲ್ಲಿದ್ದರು. ಇದೀಗ ಅವರನ್ನು ಸುಳ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕಗೊಳಿಸಲಾಗಿದೆ.
ಪ್ರವೀಣ್‌ ಶೆಟ್ಟಿಯವರು ಪಂಜ ವಲಯ ಅರಣ್ಯಾಧಿಕಾರಿಯಾಗಿ ಹಲವು ವರ್ಷಗಳ ಕಾಲ ಸೇವೆಸಲ್ಲಿಸಿದ್ದರು.
ಸುಳ್ಯದಲ್ಲಿ ಎಸಿಎಫ್‌ ಆಗಿದ್ದ ಆಸ್ಟಿನ್‌ ಪಿ ಸೋನ್ಸ್‌ ರವರು ಮೇ ತಿಂಗಳಲ್ಲಿ ನಿವೃತ್ತರಾದ ಬಳಿಕ ಸುಳ್ಯದ ಎಸಿಎಫ್‌ ಹುದ್ದೆ ಖಾಲಿಯಾಗಿತ್ತು. ಮೇ ತಿಂಗಳಿನಿಂದ ಇದುವರೆಗೆ ಪುತ್ತೂರು ಎಸಿಎಫ್‌ ಕಾರ್ಯಪ್ಪ ರವರು ಸುಳ್ಯದ ಪ್ರಭಾರ ವಹಿಸಿಕೊಂಡಿದ್ದರು.

Related Articles

Back to top button