ಶುಭಶ್ರೀ ಮಹಿಳಾ ಮಂಡಲದಿಂದ ‘ಆಟಿ ಸಂಭ್ರಮ’…

ಸುಳ್ಯ: ಸುಳ್ಯ ಗಾಂಧಿನಗರದ ಶುಭಶ್ರೀ ಮಹಿಳಾ ಮಂಡಲದ ವತಿಯಿಂದ ಪೇರಾಲು ಸರಕಾರಿ ಶಾಲೆಯಲ್ಲಿ ‘ಆಟಿ ಸಂಭ್ರಮ’ ಮತ್ತು ಶಾಲಾ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮ ಆ.11 ರಂದು ಜರಗಿತು.
ಮಹಿಳಾ ಮಂಡಲದ ಅಧ್ಯಕ್ಷೆ ಶ್ರೀಮತಿ ಶಶಿಕಲಾ ಹರಪ್ರಸಾದ್ ಸಭಾಧ್ಯಕ್ಷತೆ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಜಯಪ್ರಕಾಶ್ ಕುಕ್ಕೇಟಿ ಭಾಗವಹಿಸಿದ್ದರು. ಎಸ್.ಡಿ.ಎಂ.ಸಿ ಅಧ್ಯಕ್ಷ ನವೀನ್ ಕುಮಾರ್ ಯಾವಟೆ, ಮಂಡಲದ ಕಾರ್ಯದರ್ಶಿ ಯಶಸ್ವಿನಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಸುನಂದಾ ಸ್ವಾಗತಿಸಿ, ಕೋಶಾಧಿಕಾರಿ ಗಿರಿಜಾ ಎಂ. ವಿ. ವಂದಿಸಿದರು. ಶಿಕ್ಷಕಿ ಲತಾಶ್ರೀ ನಿರೂಪಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಮತ್ತು ಊರವರು ಶ್ರಮದಾನ ನಡೆಸಿದರು.
ಮಹಿಳಾ ಮಂಡಲದ ವತಿಯಿಂದ ಆಟಿಯ ತಿನಿಸುಗಳಾದ ಪತ್ರೊಡೆ ಆಟಿ ಪಾಯಸವನ್ನು ವಿತರಿಸಲಾಯಿತು.

Sponsors

Related Articles

Back to top button