ಧರ್ಮಸ್ಥಳದಲ್ಲಿ ರುದ್ರಾನುಷ್ಠಾನ ಸಮರ್ಪಣೆ- ಬಂಟ್ವಾಳ ಕೂಟ ಮಹಾಜಗತ್ತು ಪ್ರತಿನಿಧಿಗಳ ಪಾಲ್ಗೊಳ್ಳುವಿಕೆ…

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆ.19 ರಂದು ಶ್ರೀರಾಮಚಂದ್ರಾಪುರಮಠ ಪರಮಪೂಜ್ಯ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತಿ ಮಹಾಸ್ವಾಮಿಗಳವರ ಅನುಗ್ರಹದೊಂದಿಗೆ ಮಂಜುನಾಥ ಸ್ವಾಮಿಗೆ ನಡೆದ ರುದ್ರಾನುಷ್ಠಾನ ಸಮರ್ಪಣೆ ಸೇವೆಯಲ್ಲಿ ಬಂಟ್ವಾಳ ಕೂಟ ಮಹಾಜಗತ್ತು ಸಂಸ್ಥೆಯ ಪ್ರತಿನಿಧಿಗಳಾದ ಸಜೀಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ಎ ರವಿಶಂಕರ ಮಯ್ಯ ಎನ್ ರಾಮಚಂದ್ರ ಮಯ್ಯ, ಶಿವಪ್ರಸಾದ್ ಕಾರಂತ, ಎಂ ಜಯರಾಮಯ್ಯ, ನರಸಿಂಹ ಮಯ್ಯ, ಪರಮೇಶ್ವರ ಹೊಳ್ಳ, ಪ್ರಭಾಕರ ಸೋಮಯಾಜಿ, ಪ್ರಕಾಶ್ ಭಟ್, ಸಜೀಪ ನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳoಜ ವೆಂಕಟೇಶ್ವರ ಭಟ್ ಮೊದಲಾದವರು ಗಣಪತಿ ಅಥರ್ವ ಶಿರ್ಶ ಮಂತ್ರ, ಭಾಗ್ಯ ಸೂಕ್ತ, ಲಗುನ್ಯಾಸ, ರುದ್ರ ಪಠಣ, ಚಮಕ, ಪುರುಷ ಸೂಕ್ತ, ಶ್ರೀ ಸೂಕ್ತ ಸಾಮೂಹಿಕ ಮಂತ್ರ ಪಠಣದಲ್ಲಿ ಪಾಲ್ಗೊಂಡರು.