ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಜಿಲ್ಲಾ ಖಾಝಿ ಭೇಟಿ…

ಮಂಗಳೂರು: ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್ ಅವರು ಮಂಗಳೂರಿನಲ್ಲಿ ದ ಕ ಜಿಲ್ಲಾ ಖಾಝಿ, ಸಮಸ್ತ ಕೇಂದ್ರ ಮುಶಾವರ ಸದಸ್ಯ ಅಲ್ ಹಾಜ್ ತ್ವಾಕ ಅಹಮದ್ ಮುಸ್ಲಿಯಾರ್ ಅಲ್ ಹಝ್ಹರಿ ಅವರನ್ನು ಭೇಟಿಯಾದರು.
ಈ ಸಂದರ್ಭದಲ್ಲಿ ದಕ ಜಿಲ್ಲಾ ಖಾಝಿ ತ್ವಾಕ ಅಹಮದ್ ಮುಸ್ಲಿಯರ್ ಅವರು ಶಾಲು ಹೊದಿಸಿ ಸನ್ಮಾನಿಸಿ, ಸಮಾಜ ಸೇವೆಯ ಜೊತೆ ಬಡವರ ಬಗ್ಗೆ ಮತ್ತು ತುಳಿತಕ್ಕೆ ಒಳಗಾದವರಿಗೆ ಸಹಾಯ ಮಾಡಲು ಸಲಹೆ ನೀಡಿದರು.