ಸಂತೆ ಉಳಿಸಲು ಹೋರಾಟ ನಡೆಸಿದ ಬಿಜೆಪಿಯಿಂದ ಸಂತೆಯನ್ನು ಇಲ್ಲವಾಗಿಸುವ ಶಡ್ಯಂತ್ರ-ಮಹಮ್ಮದ್ ಆಲಿ….

ಪುತ್ತೂರು: ಪುತ್ತೂರಿನ ಇತಿಹಾಸ ಪ್ರಸಿದ್ದ ಸೋಮವಾರದ ಸಂತೆಯನ್ನು ಉಳಿಸಬೇಕೆಂದು ಈ ಹಿಂದೆ ಹೋರಾಟ ನಡೆಸಿದ ಬಿಜೆಪಿಗರು ಇದೀಗ ವಾರದ ಸಂತೆಯನ್ನು ಇಲ್ಲವಾಗಿರುಸ ಷಡ್ಯಂತ್ರ ರೂಪಿಸುತ್ತಿದ್ದಾರೆ. ಈ ಬಗ್ಗೆ ಸಂತೆ ವ್ಯಾಪಾರಿಗಳ ಸಹಕಾರದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಪುತ್ತೂರು ನಗರಸಭೆಯ ಮಾಜಿ ವಿಪಕ್ಷ ನಾಯಕ ಮಹಮ್ಮದ್ ಆಲಿ ತಿಳಿಸಿದ್ದಾರೆ.
ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕಿಲ್ಲೆ ಮೈದಾನದಲ್ಲಿ ನಡೆಯುತ್ತಿದ್ದ ವಾರದ ಸಂತೆಯನ್ನು 2016 ರಲ್ಲಿ ಉಪವಿಭಾಗದ ಕಾರ್ಯ ನಿರ್ವಾಹಕ ದಂಡಾಧಿಕಾರಿಗಳ ಆದೇಶದಂತೆ ಎಪಿಎಂಸಿಗೆ ಸ್ಥಳಾಂತರಿದ ಸಂದರ್ಭದಲ್ಲಿ ನಗರಸಭೆಯ ವಿರುದ್ದ ಬಿಜೆಪಿ ಮುಖಂಡ ರಾಜೇಶ್ ಬನ್ನೂರು ಅವರು ಕೇಸು ದಾಖಲಿಸಿದ್ದರು. ಅಲ್ಲದೆ ರಾಜೇಶ್ ಬನ್ನೂರು ಅವರ ನೇತೃತ್ವದಲ್ಲಿ ಬಿಜೆಪಿಗರು ಹಾಗೂ ಕಾಂಗ್ರೆಸ್ ಪಕ್ಷದ ಒಂದು ಗುಂಪು ಪ್ರತಿಭಟನೆ ನಡೆಸಿ ಸ್ಥಳಾಂತರವನ್ನು ತೀವ್ರವಾಗಿ ವಿರೋಧಿಸಿದ್ದರು.
ಬಳಿಕದ ಬೆಳವಣಿಗೆಯಲ್ಲಿ ವಾರದ ಸಂತೆಯನ್ನು ಪುತ್ತೂರಿನ ಕಿಲ್ಲೆ ಮೈದಾನದಲ್ಲಿಯೇ ಮುಂದುವರಿಸಲಾಗಿತ್ತು. ಇದೀಗ ಶಾಸಕ ಸಂಜೀವ ಮಠಂದೂರು ಅವರು ಎಸ್‌ಎಫ್‌ಸಿ ಯೋಜನೆಯಡಿಯಲ್ಲಿ ಮಂಜೂರುಗೊಂಡಿರುವ ರೂ. 5 ಕೋಟಿಯಲ್ಲಿ ನಗರಸಭೆಯು ಸಂತೆ ಮಾರುಕಟ್ಟೆ ನಿರ್ಮಿಸಲು ಮೀಸಲಾಗಿರಿಸಿರುವ ಜಾಗವಾದ ಹಳೇ ಪುರಸಭಾ ಕಟ್ಟಡದ ಸ್ಥಳದಲ್ಲಿ ನೂತನವಾಗಿ ನಗರಸಭಾ ಕಚೇರಿ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಜಾಗದಲ್ಲಿ ಈಗಾಗಲೇ ರೂ. 1 ಕೋಟಿ ಸಂತೆ ಮಾರುಕಟ್ಟೆ ನಿರ್ಮಾಣ ಕಾಮಗಾರಿಗೆ ಬಿಡುಗಡೆಯಾಗಿ ಟೆಂಡರ್ ಪ್ರಕ್ರಿಯೆಯೂ ನಡೆದಿದೆ. ಆದರೆ ಆ ಸ್ಥಳದಲ್ಲಿ ಸಂತೆ ಮಾರುಕಟ್ಟೆ ನಿರ್ಮಾಣವಾಗಬಾರದು ಎಂಬ ದುರುದ್ದೇಶದಿಂದ ಅಗತ್ಯವಿಲ್ಲದಿದ್ದರೂ ರೂ. 2 ಕೋಟಿ ಅನುದಾನ ಕಾದಿರಿಸಿದ್ದು, ಸರ್ಕಾರದ ಹಣವನ್ನು ದುರುಪಯೋಗ ಪಡಿಸಲಾಗುತ್ತಿದೆ. ಪುತ್ತೂರು ನಗರ ಸಭೆಗೆ ಈಗಾಗಲೇ ಎಡಿಬಿ ಅನುದಾನದಲ್ಲಿ ಸುಸಜ್ಜಿತ ಕಚೇರಿ ಇದ್ದು, ಅಲ್ಲದೆ ಅದನ್ನು ದುರಸ್ತಿಪಡಿಸಲು ಅಲ್ಲಿಯೇ ಸಾಕಷ್ಟು ಸ್ಥಳಾವಕಾಶವಿದೆ. ಶಾಸಕರು ಉತ್ತಮ ಚಿಂತನೆಯನ್ನು ಹೊಂದಿದ್ದು, ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಉತ್ಸಾಹ ಹುಮ್ಮಸ್ಸು ಹೊಂದಿದ್ದಾರೆ. ಆದರೆ ಈ ವಿಚಾರದಲ್ಲಿ ಶಾಸಕರನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಅವರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರಸಭಾ ಮಾಜಿ ಅಧ್ಯಕ್ಷೆ ಜಯಂತಿ ಬಲ್ನಾಡು, ಮಾಜಿ ಸದಸ್ಯರಾದ ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ಉಷಾ ಉಪಸ್ಥಿತರಿದ್ದರು.

Sponsors

Related Articles

Leave a Reply

Your email address will not be published. Required fields are marked *

Back to top button