ಕಾರಿನಲ್ಲಿ ಮೃತದೇಹ ಪತ್ತೆ….

ಬಂಟ್ವಾಳ: ವ್ಯಕ್ತಿಯೋರ್ವನನ್ನು ಕೊಲೆ ನಡೆಸಿ ಕಾರಿನಲ್ಲಿ ಮೃತದೇಹವನ್ನು ಬಿಟ್ಟು ಹೋದ ಘಟನೆ ಬಂಟ್ವಾಳ ನಗರ ಪೋಲಿಸ್ ಠಾಣಾ ವ್ಯಾಪ್ತಿಯ ನಗ್ರಿ ಶಾಂತಿ ನಗರದಲ್ಲಿ ನಡೆದಿದೆ.
ಮಂಚಿ ಸಮೀಪದ ನಗ್ರಿ ಶಾಂತಿನಗರ ಎಂಬಲ್ಲಿ ನಿಲ್ಲಿಸಲಾದ ಬೆಂಗಳೂರು ಮೂಲದ ಇನ್ನೋವಾ ಕಾರೊಂದರಲ್ಲಿ ಅನಾಥ ಶವವೊಂದು ಪತ್ತೆಯಾಗಿದ್ದು, ಕೊಲೆ ಎಂಬ ಶಂಕೆಯನ್ನು ಪೋಲೀಸರು ವ್ಯಕ್ತಪಡಿಸಿದ್ದಾರೆ.ಕೊಲೆಗಡುಕರು ಕೊಲೆ ನಡೆಸಿ ಬಳಿಕ ಕಾರಿನಲ್ಲಿ ಶವವನ್ನು ಬಿಟ್ಟು ಪರಾರಿಯಾಗಿರಬೇಕು ಎಂದು ಶಂಕಿಸಲಾಗಿದೆ.
ಕಾರಿನಲ್ಲಿ ರಕ್ತಸಿಕ್ತ ವಾದ ರೀತಿಯಲ್ಲಿ ಸುಮಾರು 40 ವರ್ಷ ಪ್ರಾಯದ ವ್ಯಕ್ತಿಯ ಶವ ಕುಳಿತ ಸ್ಥಿತಿಯಲ್ಲಿ ಇದೆ.
ಕುತ್ತಿಗೆಗೆ ಹಗ್ಗ ಬಿಗಿದು ಬಳಿಕ ಚೂರಿ ಹಾಕಲಾಗಿದೆ ಎಂದು ಶಂಕಿಸಲಾಗಿದೆ.

ಶಾಂತಿನಗರ ರಸ್ತೆಯ ಬದಿಯಲ್ಲಿ ಇರುವ ಮೈದಾನದ ರೀತಿಯ ಗುಡ್ಡದಲ್ಲಿ ಕಾರನ್ನು ನಿಲ್ಲಿಸಲಾಗಿದ್ದು, ಹಿಂಬದಿ ಸೀಟಿನಲ್ಲಿ ಶವ ಇದೆ.
ಬೆಳಿಗ್ಗೆ ಸುಮಾರು 8 ಗಂಟೆಯವರೆಗೆ ಯಾವುದೇ ಕಾರು ಇಲ್ಲಿ ಇರಲಿಲ್ಲ. ಆ ಬಳಿಕ ಕಾರು ಬಂದಿರಬೇಕು ಎಂದು ಹೇಳಲಾಗುತ್ತಿದೆ. ಕಾಸರಗೋಡು ಮೂಲದ ವ್ಯಕ್ತಿಯಾಗಿರಬೇಕು ಎಂದು ಶಂಕಿಸಲಾಗಿದೆ.ಸ್ಥಳಕ್ಕೆ ಬಂಟ್ವಾಳ ವೃತ್ತ ನಿರೀಕ್ಷಕ ಟಿ. ಡಿ.ನಾಗರಾಜ್, ನಗರ ಠಾಣಾ ಎಸ್. ಐ.ಅವಿನಾಶ್, ಗ್ರಾಮಾಂತರ ಠಾಣಾ ಎಸ್. ಐ.ಪ್ರಸನ್ನ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button