ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕಾಲಾವಧಿ ಬ್ರಹ್ಮರಥೋತ್ಸವ …

ಬಂಟ್ವಾಳ: ಬಂಟ್ವಾಳದ ಶ್ರೀ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ಕಾಲಾವಧಿ ಬ್ರಹ್ಮರಥೋತ್ಸವ ಮಾ.2 ರಂದು ಸೇರಿದ್ದ ಊರ, ಪರವೂರ ನೂರಾರು ಭಕ್ತರ ಸಮ್ಮುಖ ವೈಭವದಿಂದ ನಡೆಯಿತು.
ಶ್ರೀ ತಿರುಮಲ ವೆಂಕಟರಮಣ ದೇವರಿಗೆ ಮಲ್ಲಿಗೆ ಹರಿಕೆ ಒಪ್ಪಿಸಲು ಸಾಲುಗಟ್ಟಿ ಜನರು ನಿಂತರು. ಸೋಮವಾರ ಬೆಳಗ್ಗೆ ಪ್ರಾರ್ಥನೆ ಬಳಿಕ ಮಹಾಪೂಜೆ, ಯಜ್ಞಾದಿಗಳು ನಡೆದವು. ಸಂಜೆ ಬ್ರಹ್ಮರಥಾರೋಹಣ, ಸಮಾರಾಧನೆ, ರಾತ್ರಿ ಬ್ರಹ್ಮರಥೋತ್ಸವ ನಡೆಯಿತು. ಬಳಿಕ ವಸಂತಪೂಜೆ ಏಕಾಂತ ಸೇವೆ ನಡೆದವು.