ಸುಳ್ಯ- ಗುರುoಪು ನಾಗಪಟ್ಟಣ ಕಾಂಕ್ರೀಟ್ ರಸ್ತೆಗೆ ಶಾಸಕ ಅಂಗಾರ ರಿಂದ ಶಿಲಾನ್ಯಾಸ…
ಸುಳ್ಯ: ಸುಳ್ಯ ನ. ಪಂ. ವ್ಯಾಪ್ತಿಯ ಗುರುoಪು ನಿಂದ ಆಲೆಟ್ಟಿ ಗ್ರಾಮಕ್ಕೆ ಹೋಗುವ ರಸ್ತೆಯ ನಾಗಪಟ್ಟಣ ಸೇತುವೆ ತನಕದ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಸುಳ್ಯ ಶಾಸಕ ಎಸ್. ಅಂಗಾರ ಇಂದು (ಮೇ.29 ) ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಹರೀಶ್ ಕಂಜಿಪಿಲಿ, ಆಲೆಟ್ಟಿ ಗ್ರಾ.ಪಂ.ಅಧ್ಯಕ್ಷ ಹರೀಶ್ ರಂಗತ್ತಮಲೆ, ಎಪಿಎಂಸಿ ಸದಸ್ಯ ಜಯಪ್ರಕಾಶ್ ಕುಂಚಡ್ಕ, ನ.ಪಂ. ಸದಸ್ಯೆ ಸುಶೀಲ ಜಿನ್ನಪ್ಪ ಪೂಜಾರಿ,ನ.ಪಂ. ಸದಸ್ಯ ವಿನಯಕುಮಾರ್ ಕಂದಡ್ಕ, ಪವಿತ್ರ ಪ್ರಶಾಂತ್, ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ಶ್ರೀಪತಿ ಭಟ್ ಮಜಿಗುಂಡಿ, ಸುದರ್ಶನ ಪಾತಿಕಲ್ಲು, ಸುಭೋದ್ ಶೆಟ್ಟಿ, ಜಗದೀಶ್ ಸರಳಿಕುಂಜ, ವಿಶ್ವನಾಥ ರೈ, ಧನಂಜಯ ಕುಂಚಡ್ಕ, ನವೀನ ಕಾರ್ಯಾತೋಡಿ, ಪ್ರಶಾಂತ್.ಕೆ ಮತ್ತಿತರರು ಉಪಸ್ಥಿತರಿದ್ದರು.
ಮಳೆಹಾನಿ ಯೋಜನೆಯಡಿಯಲ್ಲಿ 20 ಲಕ್ಷ ಹಾಗೂ ಶಾಸಕರ ವಿಶೇಷ ಅನುದಾನ 10 ಲಕ್ಷ ಸೇರಿದಂತೆ ಒಟ್ಟು ರೂಪಾಯಿ 30 ಲಕ್ಷ ವೆಚ್ಚದಲ್ಲಿ 5.5 ಮೀಟರ್ ಅಗಲ, 240 ಮೀಟರ್ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿರುವುದು.