ಆದಿತ್ಯವಾರ – ದ.ಕ 147 ಹಾಗೂ ರಾಜ್ಯದಲ್ಲಿ 1925 ಕೊರೊನ ಪ್ರಕರಣ ಪತ್ತೆ…

ಮಂಗಳೂರು: ಇಂದು(ಆದಿತ್ಯವಾರ) ದ.ಕ ಜಿಲ್ಲೆಯಲ್ಲಿ 147 ,ಉಡುಪಿ ಜಿಲ್ಲೆಯಲ್ಲಿ 45 ಹಾಗೂ ರಾಜ್ಯದಲ್ಲಿ 1925 ಕೊರೊನ ಪ್ರಕರಣ ಪತ್ತೆಯಾಗಿದೆ.
ದ.ಕ ಜಿಲ್ಲೆಯಲ್ಲಿ ರವಿವಾರ ಪತ್ತೆಯಾದ ಪ್ರಕರಣಗಳ ಪೈಕಿ ಪ್ರಾಥಮಿಕ ಸಂಪರ್ಕದಿಂದ 35 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. 40 ಮಂದಿಯಲ್ಲಿ ಐಎಲ್ ಐ ಪ್ರಕರಣ ದಾಖಲಾಗಿದೆ. ಇಬ್ಬರಲ್ಲಿ SAARI ಪ್ರಕರಣಗಳು ಪತ್ತೆಯಾಗಿವೆ. ರ್‍ಯಾಂಡಮ್ ಪರೀಕ್ಷೆಯಲ್ಲಿ 48 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಒಬ್ಬರಲ್ಲಿ ಪ್ರಿ ಸರ್ಜರಿ ಪ್ರಕರಣಗಳು ಪತ್ತೆಯಾಗಿವೆ. ಸೌದಿ, ಮಸ್ಕತ್, ದುಬೈನಿಂದ ಮರಳಿದ 8 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಬೆಂಗಳೂರು, ಮುಂಬೈ, ಬಿಹಾರದಿಂದ ಮರಳಿದ ಒಟ್ಟು 7 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
ಇನ್ನು ರಾಜ್ಯದಲ್ಲಿ ಇಂದು ಹೊಸದಾಗಿ 1,925 ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದು 37 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.ಬೆಂಗಳೂರಿನಲ್ಲಿ ಇಂದು ಹೊಸದಾಗಿ 1,235 ಮಂದಿ ಕೊರೋನಾಗೆ ತುತ್ತಾಗಿದ್ದಾರೆ. ಬೆಂಗಳೂರು ನಗರ – 1235, ದಕ್ಷಿಣ ಕನ್ನಡ – 147, ಬಳ್ಳಾರಿ – 90, ವಿಜಯಪುರ – 51, ಕಲಬುರ್ಗಿ – 49, ಉಡುಪಿ – 45, ಧಾರವಾಡ – 45, ಬೀದರ್ – 29, ಮೈಸೂರು – 25, ಕೊಪ್ಪಳ – 22, ಉತ್ತರ ಕನ್ನಡ – 21, ಚಾಮರಾಜನಗರ – 19, ಹಾವೇರಿ – 15, ಹಾಸನ – 14, ಚಿಕ್ಕಬಳ್ಳಾಪುರ – 13, ತುಮಕೂರು- 13, ಕೋಲಾರ – 13, ಬೆಳಗಾವಿ – 11, ದಾವಣಗೆರೆ – 11, ರಾಯಚೂರು – 10, ಮಂಡ್ಯ – 10, ಚಿಕ್ಕಮಗಳೂರು – 09, ಶಿವಮೊಗ್ಗ – 08, ಗದಗ – 07, ರಾಮನಗರ – 06, ಬಾಗಲಕೋಟೆ – 04, ಚಿತ್ರದುರ್ಗ – 03 ಪ್ರಕರಣಗಳು ದಾಖಲಾಗಿವೆ.
ಒಟ್ಟಾರೆ 23,474 ಪ್ರಕರಣಗಳ ಪೈಕಿ 9,847 ಮಂದಿ ಡಿಸ್ಚಾರ್ಜ್ ಆಗಿದ್ದು 13,251 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇಂದು 37 ಮಂದಿ ಕೊರೋನಾಗೆ ಬಲಿಯಾಗಿದ್ದು ರಾಜ್ಯದಲ್ಲಿ ಇದುವರೆಗೂ 373 ಮಂದಿ ಬಲಿಯಾಗಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button