ರೋ.ಗಣೇಶ್ ಜಿ.ಟಿ.ಭಟ್ ಇವರಿಗೆ ಅತ್ಯುತ್ತಮ ರೋಟರಾಕ್ಟ್ ಜಿಲ್ಲಾ ಪ್ರತಿನಿಧಿ ಪ್ರಶಸ್ತಿ…

ಮಂಗಳೂರು: 2019-20 ನೇ ಸಾಲಿನಲ್ಲಿ ರೋಟರಾಕ್ಟ್ ಕ್ಲಬ್ ನ ಯಶಸ್ವಿ ಕಾರ್ಯಕ್ಕಾಗಿ ರೋಟರಿ ಜಿಲ್ಲೆ 3181 ಇದರ ಜಿಲ್ಲಾ ಪ್ರತಿನಿಧಿ(DRR ) ರೋ.ಗಣೇಶ್ ಜಿ.ಟಿ.ಭಟ್ ಗುತ್ತಿಗಾರು ಇವರು “ಅತ್ಯುತ್ತಮ ಜಿಲ್ಲಾ ಪ್ರತಿನಿಧಿ ಪ್ರಶಸ್ತಿ” ಗೆ ಭಾಜನರಾಗಿದ್ದಾರೆ.
ಇತ್ತೀಚೆಗೆ ಗುಜರಾತ್ ರೋಟರಿ ಜಿಲ್ಲೆ 3054 ಆಶ್ರಯದಲ್ಲಿ ಆನ್ ಲೈನ್ ನಲ್ಲಿ ನಡೆದ ದಕ್ಷಿಣ ಏಷಿಯಾ ಮಟ್ಟದ ರೋಟರಾಕ್ಟ್ ಕ್ಲಬ್ ಗಳ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಈ ಪ್ರಶಸ್ತಿ ಲಭಿಸಿದೆ.
ಜಿಲ್ಲಾ ಕಾರ್ಯದರ್ಶಿ ರೋ.ಪಿ.ವಿ.ಸುಬ್ರಮಣಿ ಸಂಪಾಜೆ ಇವರಿಗೆ ಕೂಡ “ಅತ್ಯುತ್ತಮ ಜಿಲ್ಲಾ ಕಾರ್ಯದರ್ಶಿ ಪ್ರಶಸ್ತಿ” ಲಭಿಸಿದೆ. ರೋ.ಗಣೇಶ್ ಜಿ.ಟಿ.ಭಟ್ ಮತ್ತು ರೋ.ಪಿ.ವಿ.ಸುಬ್ರಮಣಿ ಇಬ್ಬರು ಕೂಡ ಸುಳ್ಯ ತಾಲೂಕಿನವರಾಗಿದ್ದಾರೆ. ಇವರಿಬ್ಬರು 2020-21 ನೇ ಸಾಲಿಗೆ ರೋಟರಾಕ್ಟ್ ಜಿಲ್ಲೆ 3181 ರಲ್ಲಿ ನಿರ್ದೇಶಕರುಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

Sponsors

Related Articles

Leave a Reply

Your email address will not be published. Required fields are marked *

Back to top button