ಕೋವಿಡ್ ನಿಯಂತ್ರಣಕ್ಕೆ ಸರಕಾರ ನೀಡಿರುವ ಅನುದಾನ, ಖರ್ಚಿನ ಲೆಕ್ಕವನ್ನು ನೀಡಬೇಕು -ಎಂ. ವೆಂಕಪ್ಪ ಗೌಡ…

ಸುಳ್ಯ: ಕೊರೊನ ವೈರಸ್ ಮಹಾಮಾರಿಯಿಂದ ದೇಶವೆ ತಲ್ಲಣಗೊಂಡಿದ್ದು ಇದರ ಪರಿಹಾರಕ್ಕಾಗಿ ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಸುಳ್ಯ ನಗರ ಪಂಚಾಯತ್ ನಲ್ಲಿ ನಗರ ಪ್ರದೇಶದ ಜನತೆಗೆ ಕೋವಿಡ್ ನ ಹಿನ್ನೆಲೆ ಬಂದಿರುವ ಸರಕಾರದ ಯೋಜನೆಯ ಕುರಿತು ಯಾವುದೇ ಅನುದಾನ ಬರಲಿಲ್ಲವೆಂದು ಹೇಳುತ್ತಾರೆ. ಇಲ್ಲಿ ನಾವು ಸರಕಾರದ ಮಾತನ್ನು ನಂಬಬೇಕೋ ಅಥವಾ ಸುಳ್ಯ ನ.ಪಂ.ಅಧಿಕಾರಿಗಳು ಹೇಳುವ ಮಾತನ್ನು ನಂಬಬೇಕೋ ಎಂದು ಕೆಪಿಸಿಸಿ ಮಾಜಿ ಕಾರ್ಯದರ್ಶಿ ಎಂ. ವೆಂಕಪ್ಪ ಗೌಡ ಪ್ರಶ್ನಿಸಿದ್ದಾರೆ.
ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲವು ದಿನಗಳ ಹಿಂದೆ ನಗರ ಪಂಚಾಯತ್ ನೇತೃತ್ವದಲ್ಲಿ ಕೊರೊನ ತಡೆ ವಿಚಾರದಲ್ಲಿ ಮಾಹಿತಿ ಕಾರ್ಯಗಾರವನ್ನು ನಡೆಸಿದ್ದರು. ಈ ಕಾರ್ಯಗಾರದಲ್ಲಿ ನಗರದ ಪ್ರತಿಯೊಂದು ಅಂಗನವಾಡಿಯ ಕಾರ್ಯಕರ್ತೆಯರು ಎಲ್ಲಾ ವಾರ್ಡಿನ ಒಬ್ಬ ಜನಪ್ರತಿನಿಧಿ , ಒಬ್ಬ ಅಧಿಕಾರಿ, ಒಂದು ಆಶಾ ಕಾರ್ಯಕರ್ತೆ ಭಾಗವಹಿಸುವಂತೆ ತೀರ್ಮಾನಿಸಲಾಗಿತ್ತು. ನಂತರ ಆಯ ವಾರ್ಡಿನ ಪ್ರತಿಯೊಂದು ಮನೆಗಳಿಗೂ ತೆರಳಿ ಕಾರ್ಯಗಾರದಲ್ಲಿ ಪಡೆದ ಮಾಹಿತಿಯನ್ನು ಉಪಯೋಗಿಸುವಂತೆ ಯೋಜನೆಯನ್ನು ರೂಪಿಸಲಾಗಿತ್ತು. ಆದರೆ ಕೇವಲ ಬೆರಳಣಿಕೆಯಷ್ಟು ಮಂದಿ ಮಾತ್ರ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಪ್ರಯೋಜನವಿಲ್ಲದಂತಾಯಿತು.‌ ಇದಕ್ಕೆ ನ.ಪಂ. ಅಧಿಕಾರಿಗಳೇ ಮುಖ್ಯ ಕಾರಣ. ತಾಲೂಕು ಆಡಳಿತ, ನ.ಪಂ., ಸುಳ್ಯ ಆರೋಗ್ಯ ಇಲಾಖೆ ಇವರು ಕೋವಿಡ್ ನಿಯಂತ್ರಣಕ್ಕೆ ಸರಕಾರ ನೀಡಿರುವ ಅನುದಾನ, ಖರ್ಚಿನ ಲೆಕ್ಕದ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಬೇಕು. ಇದರ ಬಗ್ಗೆ ಅಸಮರ್ಪಕ ಉತ್ತರ ಬಂದಲ್ಲಿ ನ.ಪ. ವಿರುದ್ದ ಮೇಲಾಧಿಕಾರಿಗಳಿಗೆ ದೂರು ನೀಡುತ್ತೇವೆ ಎಂದೂ ಅವರು ಎಚ್ಚರಿಸಿದರು.

ಕೆಪಿಸಿಸಿ ವತಿಯಿಂದ ಉತ್ತಮವಾದ ಕಾರ್ಯಕ್ಕೆ ಮುಂದಾಗಿದ್ದು, ಒಬ್ಬ ವೈಧ್ಯರು ಸೇರಿದಂತೆ ಸಂಬಂದಪಟ್ಟ ವೈಧ್ಯಕೀಯ ಸಲಕರಣೆಯ ಕಿಟ್ ಗಳ ಸಹಿತ ಗ್ರಾಮ ಗ್ರಾಮದ ಪ್ರತಿಯೊಂದು ಮನೆಗಳಿಗೆ ಭೇಟಿ ನೀಡಿ ಪರೀಕ್ಷಿಸಲು ಯೋಜನೆಯನ್ನು ರೂಪಿಸಲಾಗಿದ್ದು ಸರಕಾರ ಮತ್ತು ಜನಸಾಮಾನ್ಯರ ನಡುವೆ ಒಂದು ಕೊಂಡಿಯಾಗಿ ಕೆಲಸ ಮಾಡಲಿದ್ದೇವೆ ಎಂದ ವೆಂಕಪ್ಪ ಗೌಡರು, ಕೊರೊನಾ ಮಹಮಾರಿಗೆ ಯಾರು ಕೂಡ ಭಯಭೀತರಾಗುವ ಅವಶ್ಯಕತೆಯಿಲ್ಲ , ಕೊರೊನ ಲಕ್ಷಣ ಕಂಡುಬಂದವರಲ್ಲಿ ಹೆಚ್ವಿನವರು ಗುಣಮುಖರಾಗಿರುತ್ತಾರೆ, ರೋಗದ ಲಕ್ಷಣ ಇದ್ದರೆ ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಕೊಳ್ಳಿ. ಇದೀಗ ಸರಕಾರಿ ಅಸ್ಪತ್ರೆಯಲ್ಲಿ ಕೇವಲ 30 ನಿಮಿಷದಲ್ಲಿ ಕೋವಿಡ್ ನ ವರದಿ ನೀಡುವ ಯಂತ್ರವನ್ನು ಅಳವಡಿಸಲಾಗಿದ್ದು ಇದು ಸುಳ್ಯದ ಜನತೆಗೆ ಹೆಚ್ವು ಸಹಕಾರಿಯಾಗಲಿದೆ ಎಂದರು.

Sponsors

Related Articles

Leave a Reply

Your email address will not be published. Required fields are marked *

Back to top button