ಸುಳ್ಯ – ಕೆರೆಮೂಲೆ ವಾರ್ಡ್ ನಲ್ಲಿ ಆರೋಗ್ಯ ಮಾಹಿತಿ ಸಂಗ್ರಹಕ್ಕೆ ಚಾಲನೆ…

ಸುಳ್ಯ: ನಗರದ ಕೆರೆಮೂಲೆ ವಾರ್ಡ್ ನಲ್ಲಿ ಮನೆ-ಮನೆ ಆರೋಗ್ಯ ಮಾಹಿತಿ ಸಂಗ್ರಹಕ್ಕೆ ಇಂದು ಚಾಲನೆ ನೀಡಲಾಯಿತು.
ರಾಜ್ಯ ಸರಕಾರದ ಆದೇಶದಂತೆ ವಾರ್ಡ್ ಗಳಿಗೆ ರಚಿಸಲಾದ ಕೋವಿಡ್ -19 ಟಾಸ್ಕ್ ಫೋರ್ಸ್ ತಂಡದ ಮೂಲಕ ಪ್ರತಿ ಮನೆಯ ಎಲ್ಲಾ ಸದಸ್ಯರ ಆರೋಗ್ಯ ಮಾಹಿತಿ ಸಂಗ್ರಹದ ಯೋಜನೆ ಇದಾಗಿದೆ.
ಸುಳ್ಯ ನ.ಪಂ. ನ ವಾರ್ಡ್ ಸಂಖ್ಯೆ 12 (ಕೆರೆಮೂಲೆ) ಇದರ ಮನೆ-ಮನೆ ಆರೋಗ್ಯ ಮಾಹಿತಿ ಸಂಗ್ರಹಕ್ಕೆ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ನ.ಪಂ. ಸದಸ್ಯ ಎಂ. ವೆಂಕಪ್ಪ ಗೌಡ, ಟಾಸ್ಕ್ ಫೋರ್ಸ್ ತಂಡದ ಸದಸ್ಯರಾದ ಉಬರಡ್ಕ ಪ್ರೌಢ ಶಾಲೆಯ ಶಿಕ್ಷಕ ಉನ್ನಿಕೃಷ್ಣನ್, ಅಡ್ಪ೦ಗಾಯ ಶಾಲೆಯ ರಾಜೀವಿ. ಎ, ಬೂಡು ಅಂಗನವಾಡಿ ಕಾರ್ಯಕರ್ತೆ ಕವಿತಾ, ಸ್ಥಳೀಯರಾದ ಸುರೇಶ ಉಪಸ್ಥಿತರಿದ್ದರು.

IMG 20200730 WA0016 300x225

IMG 20200730 WA0015 300x225

Related Articles

Leave a Reply

Your email address will not be published. Required fields are marked *