ಕೃಷ್ಣಪ್ಪ ಮೂಲ್ಯ – ಬೀಳ್ಕೊಡುಗೆ ಕಾರ್ಯಕ್ರಮ…

ಬಂಟ್ವಾಳ: ಬಂಟ್ವಾಳ ತಾಲೂಕು ವೀರಕಂಬ ಗ್ರಾಮ ಪಂಚಾಯತಿನಲ್ಲಿ ಸುದೀರ್ಘ 28 ವರ್ಷಗಳ ಕಾಲ ಪಂಚಾಯತಿನ ಬಿಲ್ ಕಲೆಕ್ಟರ್ ಹಾಗೂ ಜವಾನರಾಗಿ ಸೇವೆ ಸಲ್ಲಿಸಿದ ಶ್ರೀಯುತ ಕೃಷ್ಣಪ್ಪ ಮೂಲ್ಯ ಬೆತ್ತಸರವ್ ಇವರ ವಯೋ ನಿವೃತ್ತಿ ಕಾರಣದಿಂದ ಬೀಳ್ಕೊಡುಗೆ ಕಾರ್ಯಕ್ರಮ ವೀರಕಂಬ ಗ್ರಾಮ ಪಂಚಾಯತಿನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಯುತ ದಿನೇಶ್, ಉಪಾಧ್ಯಕ್ಷರಾದ ಶ್ರೀಮತಿ ಶೀಲಾ ವೇಗಸ್, ಪಂಚಾಯತ್ ಸದಸ್ಯರಾದ ಜನಾರ್ದನ ಪೂಜಾರಿ, ಅಬ್ದುಲ್ ರೆಹಮಾನ್,ಜಯಂತಿ ಜನಾರ್ಧನ್, ಸಂದೀಪ್, ಜಯಪ್ರಸಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಯುತ ನಿಶಾಂತ್, ಸಿಬ್ಬಂದಿಗಳಾದ ವಿನುತ, ಮಿಥುನ್, ಚಂದ್ರಹಾಸ, ದಿವ್ಯಮತಿ, ಪಂಚಾಯತ್ ಗ್ರಂಥ ಪಾಲಕಿ ಗೀತಾ ಜಗದೀಶ್, ಪ್ರೇಮ ಆಚಾರ್ಯ , ದಿನೇಶ್ ಆಚಾರ್ಯ, ಗಣೇಶ್ ಕೋಡಿ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button