ಅಯುಷ್ಮಾನ್ ಭಾರತ್ ಯೋಜನೆಯ ಉಚಿತ ನೋಂದಾವಣಿ ಶಿಬಿರ…

ಬಂಟ್ವಾಳ: ಪೆರಾಜೆ ವಲಯ ಕಾಂಗ್ರೆಸ್, ಪೆರಾಜೆ ಯುವಕ ಮಂಡಲ ,ಸೈಲೆಂಟ್ ಫ್ರೆಂಡ್ಸ್ ಬುಡೋಳಿ, ಯುವ ಕಾಂಗ್ರೆಸ್ ಬಂಟ್ವಾಳ ಇದರ ಆಶ್ರಯದಲ್ಲಿ ಅಯುಷ್ಮಾನ್ ಭಾರತ್ ಯೋಜನೆಯ ಉಚಿತ ನೋಂದಾವಣಿ ಶಿಬಿರ ಮತ್ತು ಕಾರ್ಡ್ ವಿತರಣಾ ಸಮಾರಂಭಕ್ಕೆ ಜಿಲ್ಲಾ ಮಾಜಿ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಭೇಟಿ ನೀಡಿ ಫಲಾನುಭವಿಗಳಿಗೆ ಕಾರ್ಡ್ ವಿತರಿಸಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಮಂಜುಳಾ ಕುಶಲ ಪೆರಾಜೆ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕುಲಾಲ್, ಕುಶಲ ಪೆರಾಜೆ, ಉಮ್ಮರ್ ಪೆರಾಜೆ, ತಿಮ್ಮಪ್ಪ, ಮೋಹಿನಿ ಮೊದಲಾದವರು ಉಪಸ್ಥಿತರಿದ್ದರು.