ಸುಳ್ಯ ಇನ್ನರ್‍ವ್ಹೀಲ್ ಕ್ಲಬ್ ವತಿಯಿಂದ ವನಮಹೋತ್ಸವ…

ಸುಳ್ಯ: ಇನ್ನರ್‍ವ್ಹೀಲ್ ಕ್ಲಬ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮವು ಸರಕಾರಿ ಹಿ. ಪ್ರಾ. ಶಾಲೆ ತೊಡಿಕಾನದಲ್ಲಿ ನಡೆಯಿತು.
ತೊಡಿಕಾನ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಚಂದ್ರಕಲಾ ಕುತ್ತಮೊಟ್ಟೆ ಔಷಧೀಯ ಸಸ್ಯಗಳ ಬಗ್ಗೆ ಮಾಹಿತಿ ನೀಡಿದರು. ಇನ್ನರ್‍ವ್ಹೀಲ್ ಕ್ಲಬ್ ಅಧ್ಯಕ್ಷೆ ಡಾ.ಹರ್ಷಿತಾ ಪುರುಷೋತ್ತಮ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಿಕೆಯಲ್ಲಿ ಪೂರ್ವಾಧ್ಯಕ್ಷೆ ಶ್ರೀಮತಿ ಮಮತಾ ಸತೀಶ್, ಖಜಾಂಜಿ ಶ್ರೀಮತಿ ಪೂಜಾ ಸಂತೋಷ್, ಶ್ರೀಮತಿ ಯೋಗಿತಾ ಗೋಪಿನಾಥ್, ಶ್ರೀಮತಿ ಜಯಲಕ್ಷ್ಮಿ ರೈ ಹಾಗೂ ಕ್ಲಬ್ಬಿನ ಸದಸ್ಯೆಯರು ಭಾಗವಹಿಸಿದ್ದರು. ನಂತರ ಶಾಲಾ ಮಕ್ಕಳಿಗೆ ವನಮಹೋತ್ಸವದ ಕುರಿತು ರಸಪ್ರಶ್ನೆಯನ್ನು ಹಮ್ಮಿಕೊಂಡು, ಔಷದೀಯ ಗಿಡಗಳನ್ನು ನೆಡಲಾಯಿತು.

Sponsors

Related Articles

Leave a Reply

Your email address will not be published. Required fields are marked *

Back to top button