ಮದರಸ ಶಿಕ್ಷಕರ ಒಕ್ಕೂಟ(SJM)ವತಿಯಿಂದ ಶೈಕ್ಷಣಿಕ ವರ್ಷದ ವಿದಾಯಕೂಟ…
ಸುಳ್ಯ: ಮದರಸ ಶಿಕ್ಷಕರ ಒಕ್ಕೂಟ(SJM)ವತಿಯಿಂದ ಪ್ರಸಕ್ತ ಶೈಕ್ಷಣಿಕ ವರ್ಷದ ವಿದಾಯಕೂಟ,ರಂಜಾನ್ ಕಿಟ್,ಪ್ರೋತ್ಸಾಹ ಧನ ವಿತರಣೆ,ಮತ್ತು ಪ್ರತಿಭಾ ಪುರಸ್ಕಾರ , ಸುನ್ನಿ ಜಮ್ಮೀಯತುಲ್ ಮುಅಲ್ಲಿಮೀನ್ ಸುಳ್ಯ ರೇಂಜ್ ವತಿಯಿಂದ ನಾನಾ ಕಾರ್ಯಕ್ರಮಗಳು ಜರಗಿತು.
ಧಾರ್ಮಿಕ ಅಧ್ಯಯನ ಚಿಕ್ಕoದಿನಿoದಲೇ ಪಡೆದಾಗ ಸಂಸ್ಕಾರ ಬೆಳೆಯಲು ಸಾಧ್ಯವಾಗುತ್ತದೆ ಅದ್ಯಾಪಕ ವೃತ್ತಿ ಶ್ರೇಷ್ಠ ವಾದ ಕಾಯಕ ಎಂದು ಈ ಸಂದರ್ಭದಲ್ಲಿ ಕೆ. ಎಂ. ಮುಸ್ತಫ ಹೇಳಿದರು.
ಮದರಸ ಅಧ್ಯಾಪಕರು ಗಳಿಗೆ ರಂಜಾನ್ ಆಹಾರ ಸಾಮಗ್ರಿಗಳ ಕಿಟ್ ವಿತರಿಸಿ ಅವರು ಮಾತನಾಡುತ್ತಿದ್ದರು
ಅಧ್ಯಕ್ಷತೆಯನ್ನು ಎಸ್ ಜೆ ಎಂ ಸುಳ್ಯ ರೇಂಜ್ ಅಧ್ಯಕ್ಷ ಮಹಮ್ಮದ್ ಸಖಾಫಿ ಮೊಗರ್ಪಣೆ ವಹಿಸದ್ದರು. ಎಸ್ ಜೆ ಎಂ ದ. ಕ. ಜಿಲ್ಲಾ ಪೂರ್ವ ವಲಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುಂಡೂರ್ ದುವಾ ಮಾಡಿ ಚಾಲನೆ ನೀಡಿದರು.
ಸುನ್ನಿ ಮ್ಯಾನೆಜ್ಮೆಂಟ್ ಅಸೋಸಿಯೇಷನ್ ಅಧ್ಯಕ್ಷ ಹಮೀದ್ ಬೀಜಕೊಚ್ಚಿ ಉದ್ಘಾಟಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪೂರ್ವ ವಲಯ ಅಧ್ಯಕ್ಷ ಇಬ್ರಾಹಿಂ ಸಖಾಫಿ ಪುoಡೂರ್ ದುವಾ ಪ್ರಾರ್ಥನೆಗೈದರು
ಸುನ್ನಿ ಮ್ಯಾನೆಜ್ ಮೆಂಟ್ ಅಸೋಸಿಯೇಷನ್ ಸುಳ್ಯ ರೀಜನಲ್ ಅಧ್ಯಕ್ಷ ಹಮೀದ್ ಬೀಜಕೊಚ್ಚಿ ಉದ್ಘಾಟಿಸಿದರು.
ಸುಳ್ಯ ರೇಂಜ್ ಎಸ್ಎಂಎ ಖಜಾಂಜಿ ಲತೀಫ್ ಹರ್ಲಡ್ಕ ಪ್ರೋತ್ಸಾಹಧನ ವಿತರಿಸಿದರು. ಮದರಸ ಉಸ್ತುವಾರಿ ಹಾಜಿ ಎಸ್. ಎಂ. ಅಬ್ದುಲ್ ಹಮೀದ್, ಎಸ್ ವೈ ಎಸ್ ಜಿಲ್ಲಾ ಸದಸ್ಯ ಸಿದ್ದೀಕ್ ಕಟ್ಟೆಕ್ಕಾರ್ಸ್ ಜಿಲ್ಲಾ ಸಮಿತಿ ಯಿಂದ ಅಗ್ರಶ್ರೇಣಿ ಯಲ್ಲಿ ತೇರ್ಗಡೆಗೊಂಡ ವಿದ್ಯಾರ್ಥಿಗಳಿಗೆ ಪ್ರಶಸ್ತಿಮತ್ತು ಪ್ರೋತ್ಸಾಹ ಧನ ವಿತರಿಸಿದರು. ಎಸ್ಎಂಎಪ್ರಧಾನ ಕಾರ್ಯದರ್ಶಿ ಲತೀಫ್ ಸಖಾಫಿ ಗೂನಡ್ಕ, ಕಾರ್ಯದರ್ಶಿ ಶರೀಫ್ ಜಟ್ಟಿಪ್ಪಳ್ಳ,ಜಯನಗರ ಮದರಸ ಕಾರ್ಯದರ್ಶಿ ಹಸೈನಾರ್ ಜಯನಗರ,ಪರೀಕ್ಷಾ ಸಮಿತಿ ಅಧ್ಯಕ್ಷ ಅಬೂಬಕ್ಕರ್ ಮುಸ್ಲಿಯಾರ್, ಪೈಚಾರ್ ಜುಮಾ ಮಸೀದಿ ಖತೀಬರಾದ ಮುನೀರ್ ಸಖಾಫಿ,ಗೂನಡ್ಕ ಜಮ್ಮಾ ಮಸೀದಿ ಖತೀಬರಾದ ಮೊಹಮ್ಮದ್ ಅಲಿ ಸಖಾಫಿ,ಜಾಲ್ಸೂರು ಮದರಸ ಮುಖ್ಯ ಶಿಕ್ಷಕರಾದ ಜುನೈದ್ ಹಿಮಮಿ,ಎಸ್ ಜೆ ಎಂ ವೆಲ್ಫೇರ್ ಕಾರ್ಯದರ್ಶಿ ಹನೀಫ್ ಸಖಾಫಿ ಬೆಳ್ಳಾರೆ,
ಮೊದಲಾದವರು ಉಪಸ್ಥಿತರಿದ್ದರು.ಪ್ರಸಕ್ತ ವರ್ಷ ನಿಧನ ಹೊಂದಿದ ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂಬ್ರ, ತಾಜುಷರೀಯ ಆಲಿ ಕುಂಞಉಸ್ತಾದ್,ಇಸ್ಮಾಯಿಲ್ ಮುಸ್ಲಿಯಾರ್ ನೆಕ್ಕಿಲಾಡಿ, ಚೆರಿಯ ಎ. ಪಿ. ಉಸ್ತಾದ್, ಮೊದಲಾದವರ ಹೆಸರಿನಲ್ಲಿ ತಹಲೀಲ್, ಯಾಸೀನ್ ಪಾರಾಯಣ ಸಮರ್ಪಿಸಲಾಯಿತು ಕಾರ್ಯದರ್ಶಿ ನಿಜಾರ್ ಸಖಾಫಿ ಮುಡೂರ್, ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.