ಎಂಟನೇ ವರ್ಷದ ಸಂಭ್ರಮವನ್ನು ಆಚರಿಸಿದ ಕೆಸಿಎಫ್ ಒಮಾನ್…
ಒಮಾನ್: ಅನಿವಾಸಿ ಕನ್ನಡಿಗರ ಏಳಿಗೆಗಾಗಿ ಹಾಗೂ ಸುನ್ನತ್ ಜಮಾಅತಿನ ಆಶಯ ಆದರ್ಶದಲ್ಲಿ ಕಾರ್ಯಾಚರಿಸಲು ಮರ್ಹೂಂ ತಾಜುಲ್ ಫ಼ುಖಹಾಹ್ ಖಾಝಿ ಶೈಖುನಾ ಬೇಕಲ್ ಉಸ್ತಾದರ ಪುಣ್ಯ ಹಸ್ತದಿಂದ ಸ್ಥಾಪಿಸಿದ ಕರ್ನಾಟಕ ಕಲ್ಚರಲ್ ಫೌಂಡೇಶನ್( ಕೆಸಿಎಫ್) ಹಾಗೂ ಸುನ್ನತ್ ಜಮಾಅತಿನ ಉಲಮಾ ಮತ್ತು ಉಮರಾ ನಾಯಕರು ಕೆ ಸಿ ಎಫ್ ಎಂಬ ಸಂಘಟನೆಗೆ ಭದ್ರ- ಬುನಾದಿಯನ್ನು ಹಾಕಿಕೊಟ್ಟು ಇಂದಿಗೆ ಯಶಸ್ವಿಯಾಗಿ 8 ವರ್ಷ ಪೂರ್ತಿಗೊಳಿಸಿ 9ನೇ ವರ್ಷಕ್ಕೆ ಕಾಲಿರಿಸಿದ ಈ ಸಂಧರ್ಭದಲ್ಲಿ ಕೆಸಿಎಫ್ ಒಮಾನ್ ರಾಷ್ಟ್ರೀಯ ಸಮಿತಿಯ ವತಿಯಿಂದ ಕೆಸಿಎಫ್ ಫೌಂಡೇಶನ್ ಡೇ ಕೆಸಿಎಫ್ ಒಮಾನ್ ಅಧ್ಯಕ್ಷರಾದ ಜನಾಬ್ ಅಯ್ಯೂಬ್ ಕೋಡಿ ಇವರ ಅಧ್ಯಕ್ಷತೆಯಲ್ಲಿ Zoom Online ಮುಖಾಂತರ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಕೆಸಿಎಫ್ ಅಂತರರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಖಮರುದ್ದೀನ್ ಗೂಡಿನಬಳಿ ಸೌದಿ ಅರೇಬಿಯಾ ಇವರು ನೆರವೇರಿಸಿದರು.ಎಸ್ಎಸ್ಎಫ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ ಇವರು ಮುಖ್ಯ ಪ್ರಭಾಷಣಗೈದರು.ಮುಖ್ಯ ಅತಿಥಿಗಳಾಗಿ ಕೆಸಿಎಫ್ ಯುಎಇ ಅಧ್ಯಕ್ಷರಾದ ಜಲೀಲ್ ನಿಝಾಮಿ, ಅಲ್ ಅಬೀರ್ ಗ್ರೂಪ್ ಎಂಡಿ ಶ್ರೀ ಶಶಿದರ ಶೆಟ್ಟಿ, ಇಂಡಿಯನ್ ಸೋಷಿಯಲ್ ಕ್ಲಬ್ ತುಳು ವಿಂಗ್ ಅಧ್ಯಕ್ಷರಾದ ಶ್ರೀ ರಮಾನಂದ ಎಂ ಶೆಟ್ಟಿ ಇವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಆಡಳಿತ ವಿಭಾಗ ಕಾರ್ಯದರ್ಶಿ ಇಕ್ಬಾಲ್ ಬೊಲ್ಮಾರ್ ಬರ್ಕ, ಕೆಸಿಎಫ್ ಒಮಾನ್
ಕೋಶಾಧಿಕಾರಿ ಜನಾಬ್ ಆರಿಫ್ ಕೋಡಿ , ಸಂಘಟನಾಧ್ಯಕ್ಷರಾದ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ, ಸಾಂತ್ವನ ವಿಭಾಗದ ಅಧ್ಯಕ್ಷರಾದ ಇಬ್ರಾಹಿಮ್ ಹಾಜಿ ಅತ್ರಾಡಿ, ಶಿಕ್ಷಣ ವಿಭಾಗದ ಅಧ್ಯಕ್ಷ ಉಬೈದುಲ್ಲಾ ಸಖಾಫಿ, ಪಬ್ಲಿಷಿಂಗ್ ವಿಭಾಗದ ಅಧ್ಯಕ್ಷ ಶಮೀರ್ ಉಸ್ತಾದ್ ಹೂಡೆ ಹಾಗೂ ಎಲ್ಲಾ ಝೋನ್ ಅಧ್ಯಕ್ಷರೂ, ರಾಷ್ಟ್ರೀಯ ಸಮಿತಿಯ ನಾಯಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಸಾಂತ್ವನ ಪದ್ದತಿಯನ್ನು ಸಾಂತ್ವನ ವಿಭಾಗದ ಕಾರ್ಯದರ್ಶಿ ಇಕ್ಬಾಲ್ ಎರ್ಮಾಳ್ ಘೋಷಿಸಿದರು.
ಇಹ್ಸಾನ್ ಕರ್ನಾಟಕ ಇದರ ಅಧ್ಯಕ್ಷ ಹಂಝ ಹಾಜಿ ಕನ್ನಂಗಾರ್ ಪ್ರಸ್ತಾಪಿಕ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ಸಾದಿಕ್ ಹಾಜಿ ಸುಳ್ಯ ಸ್ವಾಗತಿಸಿ , ಆಡಳಿತ ವಿಭಾಗ ಕಾರ್ಯದರ್ಶಿ ಸಿದ್ದೀಕ್ ಮಾಂಬ್ಳಿ ಸುಳ್ಯ ವಂದಿಸಿ, ಕಲಂದರ್ ಬಾವ ಕಾರ್ಯಕ್ರಮ ನಿರೂಪಿಸಿದರು.