ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೈವಸ್ಥಾನ- ಪ್ರತಿಷ್ಠಾನ ವರ್ಧಂತಿ ಉತ್ಸವ…

ಬಂಟ್ವಾಳ: ಶ್ರೀ ಮಹಾಕಾಳಿ ನಾಲ್ಕೈತ್ತಾಯ ದೈವಸ್ಥಾನದ ಮಹಾಕಾಳಿಪಡ್ಪು ಸಜೀಪಮುನ್ನೂರು ಇದರ ಪ್ರತಿಷ್ಠಾನ ವರ್ಧಂತಿ ಉತ್ಸವ ವಾರ್ಷಿಕ ಪೂಜಾ ಹಾಗೂ ಬ್ರಹ್ಮಕಲಶೋತ್ಸವ ದಿನಾಚರಣೆಯ ಫೆ. 18 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಶ್ರದ್ಧಾಭಕ್ತಿಯಿಂದ ಜರಗಿತು.
ಶ್ರೀ ಷಣ್ಮುಖ ಸುಬ್ರಮಣ್ಯ ದೇವಸ್ಥಾನ ಮುಗುಳಿಯ ಶ್ರೀ ಶರಭೇಶ್ವರ ಭಜನಾ ಮಂಡಳಿ ಬೊಕ್ಕಸ, ಶ್ರೀ ಶಾರದಾ ಅಂಬಿಕ ಭಜನಾಮಂಡಳಿ ಶಾರದಾ ನಗರ ಇವರಿಂದ ಭಜನಾ ಸಂಕೀರ್ತನೆ ,ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕ ಮತ್ತು ಪುರೋಹಿತ ಪರಿಷತ್ತು ಬಂಟ್ವಾಳ ಇವರಿಂದ ಸಾಮೂಹಿಕ ಲಲಿತಾ ಸಹಸ್ರನಾಮ ಪಾರಾಯಣ, ದ್ವಾದಶ ನಾಳಿಕೇರ ಗಣಯಾಗ, ದುರ್ಗಾ ಸಪ್ತಶತಿ ಪಾರಾಯಣ, ಪ್ರಸನ್ನ ಪೂಜೆ ,ಕಲ್ಪೋಕ್ತ ಪೂಜೆ, ರಂಗಪೂಜೆ, ಮಹಾಮಂಗಳಾರತಿ, ಅನ್ನಸಂತರ್ಪಣೆ ಜರಗಿತು.

Sponsors

Related Articles

Leave a Reply

Your email address will not be published. Required fields are marked *

Back to top button