ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ…

ಬಂಟ್ವಾಳ: ಕೊರೊನ ಮಹಾಮಾರಿ ಪ್ರಪಂಚದಿಂದ ದೂರವಾಗಲಿ ಎಂಬ ಸಂಕಲ್ಪದೊಂದಿಗೆ ಸಜೀಪನಡು ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳoಜ ವೆಂಕಟೇಶ್ವರ ಭಟ್ , ಸಜಿಪ ಮಾಗಣೆ ತಂತ್ರಿ ಎಂ ಸುಬ್ರಹ್ಮಣ್ಯ ಭಟ್, ರಾಧಾಕೃಷ್ಣ ಆಳ್ವ, ರಾಮಕೃಷ್ಣ ಭಟ್, ಪ್ರದೀಪ್ ಶೆಟ್ಟಿ, ಗಣಪತಿ ಭಟ್, ಶುಭಾಷ್, ರಾಮ, ಹರೀಶ್ ಬಂಗೇರ, ಸುರೇಶ್ ಬಂಗೇರ ಮೊದಲಾದವರು ಉಪಸ್ಥಿತರಿದ್ದರು.