ಸುಳ್ಯ – ನೂತನ ಎಸ್‌ಐ ಆಗಿ ದಿಲೀಪ್‌ ಜಿ.ಆರ್‌. ಅಧಿಕಾರ ಸ್ವೀಕಾರ…

ಸುಳ್ಯ: ಸುಳ್ಯ ಪೊಲೀಸ್‌ ಠಾಣೆಯ ನೂತನ ಎಸ್‌ಐ ಆಗಿ ದಿಲೀಪ್‌ ಜಿ. ಆರ್‌. ಅವರು ಅ. 4 ರಂದು ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ.
ಸುಳ್ಯ ಎಸ್‌ಐ ಎಂ. ಆರ್‌ ಹರೀಶ್‌ ಅವರಿಗೆ ವರ್ಗಾವಣೆಯಾಗಿದೆ. ಹರೀಶ್‌ ಅವರನ್ನು ಸದ್ಯ ಪಶ್ಚಿಮ ವಲಯ ಐಜಿಪಿ ಕಚೇರಿಗೆ ನಿಯೋಜನೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಪಡುಬಿದ್ರೆ ಎಸ್‌ಐ ಆಗಿದ್ದ 2014 ರ ಬ್ಯಾಚಿನ ದಿಲೀಪ್‌ ಜಿ.ಆರ್‌. ಅವರು ವರ್ಗಾವಣೆಯಾಗಿ ಸುಳ್ಯ ಠಾಣೆಗೆ ಬಂದಿದ್ದಾರೆ.
ಕಳೆದ ಎರಡೂವರೆ ವರ್ಷಗಳಿಂದ ಸುಳ್ಯ ಠಾಣೆಯ ಎಸ್‌ಐ ಆಗಿದ್ದ ಹರೀಶ್‌ ಎಂ.ಆರ್‌. ಅವರು ನೇರ, ದಿಟ್ಟ ಹಾಗು ಜನಪರ ಅಧಿಕಾರಿ ಎಂಬ ಹೆಸರು ಗಳಿಸಿದ್ದರು. ಸುಳ್ಯ ಠಾಣಾ ವ್ಯಾಪ್ತಿಯಲ್ಲಿ ಮತ್ತು ಗಡಿ ಪ್ರದೇಶದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವುದರಲ್ಲಿ ಯಶಸ್ವಿಯಾಗುವುದರ ಜೊತೆಗೆ ಕೋವಿಡ್‌ ನಿಯಂತ್ರಣದಲ್ಲಿ ಇವರ ನೇತ್ಛತ್ಪದಲ್ಲಿ ಪೊಲೀಸ್‌ ಇಲಾಖೆ ಪೂರ್ಣವಾಗಿ ತೊಡಗಿಸಿಕೊಂಡಿತ್ತು.

Related Articles

Back to top button