ಜ.25 – ಮಾಣಿಯಲ್ಲಿ ಹಿಂದೂ ಸಂಗಮ…
ಬಂಟ್ವಾಳ: ವಿಟ್ಲ ತಾಲೂಕು ಮಾಣಿ ಮಂಡಲ ಸಂಘಟನೆ ವತಿಯಿಂದ ಜನವರಿ 25ನೇ ಭಾನುವಾರ ಮಾಣಿ ಗ್ರಾಮದ ಕೇಂದ್ರ ಸ್ಥಾನ ಮಾಣಿ ಪಟ್ಟಣದಲ್ಲಿರುವ ಸೊಸೈಟಿ ಆವರಣದಲ್ಲಿ ಹಿಂದೂ ಸಂಗಮ ನಡೆಯಲಿದೆ ಎಂದು ಹಿಂದೂ ಸಂಗಮ ಆಯೋಜನ ಸಮಿತಿ ವಿಟ್ಲ ಪ್ರಕಟಣೆಯಲ್ಲಿ ತಿಳಿಸಿದೆ.
ಅನಂತಾಡಿ, ನೆಟ್ಲ ಮೂಡ್ನೂರು, ಪೆರಾಜೆ, ಮಾಣಿ ಮತ್ತು ಬರಿಮಾರು ಗ್ರಾಮಗಳನ್ನು ಒಳಗೊಂಡ ಮಾಣಿ ಮಂಡಲದ ವ್ಯಾಪ್ತಿಯ ಮಾತೆಯರು ಸೇರಿದಂತೆ, ವಿವಿಧ ಸಂಘಟನೆಗಳು,ಭಜನಾ ಮಂಡಳಿಗಳು ಹಾಗೂ ಹಿಂದೂ ಬಾಂಧವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ನೇರಳಕಟ್ಟೆ ಗಣೇಶ ನಗರದಲ್ಲಿ ಸೇರಿ, ಅಪರಾಹ್ನ 3 ಗಂಟೆಗೆ ಬೃಹತ್ ಶೋಭಾ ಯಾತ್ರೆ ಹೊರಡಲಿದೆ. ಮಾಣಿ ಪೇಟೆಯ ವಿಶಾಲ ಮೈದಾನದಲ್ಲಿ ಸಂಜೆ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಮಾಣಿ ಮಂಡಲದ ಹಿಂದೂ ಸಂಗಮ- ಶೋಭಾ ಯಾತ್ರೆ ಸಮಿತಿ ತಿಳಿಸಿದೆ.



