ಯೋಗ ತರಬೇತಿಯ ಸಮಾರೋಪ ಸಮಾರಂಭ…

ಬಂಟ್ವಾಳ: ಚಿನ್ನರ ಲೋಕ ಸೇವಾ ಬಂಧು (ರಿ)ಬಂಟ್ವಾಳ ಆಶ್ರಯದಲ್ಲಿ ಶ್ರೀ ಕೃಷ್ಣ ಯುವಕ ಮಂಡಲ (ರಿ)ಪಣೋಲಿಬೈಲ್ ಇಲ್ಲಿ ಯೋಗಗುರು ಪ್ರಕಾಶ್ ಆನಂದ್ ಗುರೂಜಿ ಇವರ ಮಾರ್ಗದರ್ಶನದಲ್ಲಿ 10 ದಿನದ ಯೋಗ ತರಬೇತಿಯ ಸಮಾರೋಪ ಸಮಾರಂಭ ಪದ್ಮನಾಭ ಮಯ್ಯ ಎಲಬೇ ಇವರ ಅಧ್ಯಕ್ಷತೆಯಲ್ಲಿ ಆ. 21 ರಂದು ನಡೆಯಿತು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಚಿನ್ನರ ಲೋಕ ಸೇವಾ ಬಂಧು ಇದರ ನಿರ್ದೇಶಕರಾದ ಸರಪಾಡಿ ಅಶೋಕ್ ಶೆಟ್ಟಿ, ಚಿನ್ನರ ಲೋಕ ಸೇವಾ ಟ್ರಸ್ಟಿನ ನಿರ್ದೇಶಕರಾದ ಜಯಾನಂದ ಪೆರಾಜೆ ಹಾಗೂ ಸ್ಥಳೀಯರಾದ ಮಧು ಕೃಷ್ಣ ಸೋಮಯಾಜಿ, ನಾರಾಯಣ ಕುಲಾಲ್, ಶ್ರೀಕೃಷ್ಣ ಯುವಕ ಮಂಡಲದ ಅಧ್ಯಕ್ಷರಾದ ದಯಾನಂದ ಶೆಟ್ಟಿ ,ಯೋಗಾ ಸೇವಾ ಬಂಧು ಇದರ ಜಿಲ್ಲಾ ಸಂಚಾಲಕರಾದ ವಿಶ್ವನಾಥ್ ಕೊಟ್ಟಾರಿ, ಸಜೀಪಮುನ್ನೂರು ಸಹಸಂಚಾಲಕರಾದ ರಮೇಶ್ ಕುಲಾಲ್, ಪಣೋಲಿಬೈಲು ಚಂದ್ರಶೇಖರ ಶೆಟ್ಟಿ , ರಮೇಶ್ ಪಣೋಲಿಬೈಲು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಯೋಗ ಗುರುಗಳಾದ ಪ್ರಕಾಶ್ ಆನಂದ್ ಗುರೂಜಿ ಯವರನ್ನು ಸನ್ಮಾನಿಸಲಾಯಿತು ಮೋಹನದಾಸ ಕೊಟ್ಟಾರಿ ಮುನ್ನೂರು ಕಾರ್ಯಕ್ರಮ ನಿರೂಪಿಸಿದರು.

Sponsors

Related Articles

Back to top button