ಚಿಗುರು ಜ್ಞಾನ ವಿಕಾಸ ಕೇಂದ್ರದ ವಿಚಾರ ಗೋಷ್ಠಿ ಕಾರ್ಯಕ್ರಮ…
ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಾಣಿ ವಲಯದ ಅಳಕೆಮಜಲು ಒಕ್ಕೂಟದ ಚಿಗುರು ಜ್ಞಾನ ವಿಕಾಸ ಕೇಂದ್ರದ ವಿಚಾರ ಗೋಷ್ಠಿ ಕಾರ್ಯಕ್ರಮ ಅಳಕೆಮಜಲು ಶಾರದಾಂಬ ಭಜನಾ ಮಂದಿರದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಸುಧೀರ್ ಕುಮಾರ್ ಶೆಟ್ಟಿ ರವರ ಅಧ್ಯಕ್ಷತೆಯಲ್ಲಿ ಜರಗಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದ .ಕ 2 ರ ಜಿಲ್ಲಾ ನಿರ್ದೇಶಕ ರಾದ ಪ್ರವೀಣ್ ಕುಮಾರ್ ರವರು ನೆರವೇರಿಸಿ, ಇಂತಹ ಕಾರ್ಯಕ್ರಮ ದ ಮೂಲಕ ಮಹಿಳೆಯರು ಮುಖ್ಯ ವಾಹಿನಿಗೆ ಬರಲು ಸಾಧ್ಯ ಆಗಿದೆ , ಕುಟುಂಬ ದ ಪರಿವರ್ತನೆಗೆ ಇದು ಮೂಲ ಮಂತ್ರ ಆಗಬೇಕು , ನಾವು ಯೋಜನೆಯನ್ನು ಗಟ್ಟಿ ಮಾಡಿಕೊಂಡರೆ ,ನಮಗೆ ಯೋಜನೆ ಶಕ್ತಿಯಾಗಿ ನಿಲ್ಲುತ್ತದೆ ಎಂದು ಅಭಿಪ್ರಾಯಪಟ್ಟರು .
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಹರಿಣಿ ಪುತ್ತೂರಾಯ ಮಾತನಾಡಿ , ಮಹಿಳೆಯರು ಸಬಲೀಕರಣ ದೊಂದಿಗೆ ಆರ್ಥಿಕ ವಾಗಿ , ಸಾಮಾಜಿಕವಾಗಿ ಪ್ರಬಲವಾಗಬೇಕು ಎಂದರು.
ವೇದಿಕೆಯಲ್ಲಿ ವಿಟ್ಲ ಯೋಜನಾಧಿಕಾರಿ ಚೆನ್ನಪ್ಪ ಗೌಡ , ಅಳಕೆಮಜಲು ಒಕ್ಕೂಟದ ಅಧ್ಯಕ್ಷ ಶ್ರೀ ತಿರುಮಲೇಶ್ವರ ಉಪಸ್ಥಿತರಿದ್ದರು . ಮಾಣಿ ವಲಯ ಮೇಲ್ವಿಚಾರಕಿ ಶ್ರೀಮತಿ ಪ್ರೇಮಾ , ಸ್ವಾಗತಿಸಿ , ಸೇವಾಪ್ರತಿನಿಧಿ ಸುಗಂಧಿನಿ ವಂದಿಸಿದರು. ವಿಟ್ಲ ತಾಲೂಕು ಜ್ಞಾನ ವಿಕಾಸ ಸಮನ್ವಯ ಅಧಿಕಾರಿ ಸವಿತಾ ನಿರೂಪಿಸಿದರು. ನಂತರ ಕೇಂದ್ರದ ಸದಸ್ಯೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.