ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರ:ಕಾರ್ಯಾಗಾರ ಅನುಭವಗಳನ್ನು ನೆನಪಿಸುವ ಕಾರ್ಯ-ವಿಷ್ಣು ಪ್ರಸಾದ್…..

ಪುತ್ತೂರು: ಕಾರ್ಯಾಗಾರಗಳು ನಮ್ಮ ಅನುಭವವನ್ನು ಮತ್ತೆ ಮತ್ತೆ ನೆನಪಿಸುವ ಕೆಲಸ ಮಾಡುತ್ತದೆ. ದೈಹಿಕ ಶಿಕ್ಷಕರ ಕರ್ತವ್ಯ ಶಾಲಾ ಅವಧಿಯ ಬಳಿಕವೂ ನಡೆಯುತ್ತದೆ. ಸಮಾಲೋಚನಾ ಸಭೆ, ಕಾರ್ಯಗಳು ನಮ್ಮ ವ್ಯವಸ್ಥೆಯಲ್ಲಿ ಆಗಾಗೆ ನಡೆದಾಗ ನಮ್ಮಲ್ಲಿ ರಿಪ್ರೆಶ್‍ಮೆಂಟ್ ಆಗುತ್ತದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್ ಅವರು ಹೇಳಿದರು.
ಅವರು ಗುರುವಾರ ಪುತ್ತೂರಿನನ ಮಾಯಿದೆ ದೇವುಸ್ ಚರ್ಚ್ ಸಭಾಂಗಣದಲ್ಲಿ ನಡೆದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಾಯಿದೆ ದೇವುಸ್ ಚರ್ಚ್‍ನ ಸಹಾಯಕ ಧರ್ಮಗುರು ಫಾ. ವಲೇರಿಯನ್ ಪಿಂಟೊ ಮಾತನಾಡಿ ವಿದ್ಯಾರ್ಥಿಗಳು ದೈಹಿಕವಾಗಿ ಸದೃಢವಾಗಬೇಕಾದರೆ ದೈಹಿಕ ಶಿಕ್ಷಣ ಶಿಕ್ಷಕರ ಅಗತ್ಯವಿದೆ. ಅದೇ ರೀತಿ ಶಾಲೆಯ ಶಿಸ್ತಿನಲ್ಲೂ ದೈಹಿಕ ಶಿಕ್ಷಕರ ಪಾತ್ರ ಮಹತ್ವದ್ದು ಎಂದರು.
ದೈಹಿಕ ಶಿಕ್ಷಣ ಶಿಕ್ಷಕರ ಜಿಲ್ಲಾಧ್ಯಕ್ಷ ಶಿವರಾಮ್ ಎನೆಕಲ್ಲು ಅವರು ಮಾತನಾಡಿ ನಾವೆಲ್ಲರು ಎಲ್ಲಾ ವಿಚಾರದಲ್ಲೂ ವಂಚಿತರಾಗಿದ್ದೆವೆ. ನಮ್ಮ ಹಲವಾರು ಬೇಡಿಕೆಗಳಿಗೆ ನಾವು ಸಂಘಟನಾತ್ಮಕವಾಗಬೇಕು. ನಮಗೆ ತೊಂದರೆ ಆದಾಗ ಅಧಿಕಾರಿಗಳು ನಮ್ಮೊಂದಿಗೆ ಇರಬೇಕು. ಈ ನಿಟ್ಡಿನಲ್ಲಿ ನಮ್ಮ ಕರ್ತವ್ಯ ಮತ್ತು ಸಂಘಟನೆ ಉತ್ತಮ ರೀತಿಯಲ್ಲಿ ನಡೆಯಬೇಕು ಎಂದು ಹೇಳಿದರು.
ಯುವಜನ ಸಬಲೀಕರಣ ಕ್ರೀಡಾಧಿಕಾರಿ ಮಾಮಚ್ಚನ್, ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಗ್ರೇಡ್ 2 ಅಧ್ಯಕ್ಷ ಸೀತಾರಾಮ ಮಿತ್ತಡ್ಕ ಮಾತನಾಡಿದರು.
ದೈಹಿಕ ಶಿಕ್ಷಣ ಪರಿವೀಕ್ಷಕ ಸುಂದರ ಗೌಡ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಬಾಲಕೃಷ್ಣ ರೈ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಕಾರ್ಯದರ್ಶಿ ಪ್ರವೀಣಾ ರೈ ವಂದಿಸಿದರು. ಲಕ್ಷ್ಮೀ ಕೆ.ಟಿ ಕಾರ್ಯಕ್ರಮ ನಿರೂಪಿಸಿದರು.
ಮಂಗಳೂರು ದಕ್ಷಿಣ ವಲಯದ ದೈಹಿಕ ಶಿಕ್ಷಣ ಪರಿವೀಕ್ಷಕ ವಿಷ್ಣು ಹೆಬ್ಬಾರ್ ಅವರು ಮಾಹಿತಿ ಕಾರ್ಯಗಾರ ನಡೆಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button