ಬಂಟ್ವಾಳ ಬಿಜೆಪಿ ವತಿಯಿಂದ ಬಿಜೆಪಿ ಕಾರ್ಯಕರ್ತರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ದ ಉಚಿತ ಪ್ರದರ್ಶನ…
ಬಂಟ್ವಾಳ: ಶಾಸಕ ರಾಜೇಶ್ ನಾಯ್ಕ್ ಅವರ ನೇತೃತ್ವದಲ್ಲಿ ಬಂಟ್ವಾಳ ಬಿಜೆಪಿ ವತಿಯಿಂದ ಬಿಜೆಪಿ ಕಾರ್ಯಕರ್ತರಿಗಾಗಿ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ದ ಉಚಿತ ಪ್ರದರ್ಶನ ಏರ್ಪಡಿಸಲಾಗಿದ್ಸು, 700 ಕ್ಕಿಂತಲೂ ಅಧಿಕ ಮಂದಿ ಏಕಕಾಲದಲ್ಲಿ ಎರಡು ಪರದೆಗಳಲ್ಲಿ ಚಿತ್ರ ವೀಕ್ಷಿಸಿದರು.
ಕಾಶ್ಮೀರ ದ ಹಿಂದೂ ಪಂಡಿತರ ಹತ್ಯೆಯ ನೈಜಘಟನೆಯ ಆಧಾರಿತ ನಿರ್ಮಿಸಲಾದ ಈ ಚಿತ್ರ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದು, ರಾಜ್ಯದ ಬಹುತೇಕ ಕಡೆಗಳಲ್ಲಿ ಶಾಸಕರ ನೇತ್ರತ್ವದ ಲ್ಲಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿತ್ತು.
ಬಂಟ್ವಾಳದಲ್ಲಿ ಚಿತ್ರ ಮಂದಿರ ಇಲ್ಲದ ಕಾರಣ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಮಂಗಳೂರಿನ ಭಾರತ್ ಮಹಲ್ ನ ಎರಡು ಥಿಯೇಟರ್ ಗಳಲ್ಲಿ ಚಿತ್ರ ವೀಕ್ಷಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದು, ಹತ್ತಕ್ಕೂ ಅಧಿಕ ಬಸ್ ಗಳನ್ನು ಚಿತ್ರ ವೀಕ್ಷಣೆಗೆ ಉಚಿತವಾಗಿ ಅವಕಾಶ ಮಾಡಿಕೊಟ್ಟಿದ್ದರು.
ಕಾಶ್ಮೀರ ಫೈಲ್ಸ್ ಇದು ಕೇವಲ ಕಾಶ್ಮೀರಕ್ಕೆ ಸೀಮಿತವಲ್ಲ,ಜಗತ್ತಿನಲ್ಲಿ ಮುಸ್ಲಿಮರ ನಡವಳಿಕೆಯನ್ನು ಈ ಚಿತ್ರ ದಲ್ಲಿ ವಿಶ್ಲೇಷಿಸಲಾಗಿದೆ ಎಂದು ಚಿತ್ರ ವೀಕ್ಷಣೆ ಮಾಡಿದ ಬಳಿಕ ಕಲ್ಲಡ್ಕ ಡಾ| ಪ್ರಭಾಕರ ಭಟ್ ಅವರು ಹೇಳಿದರು.
ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಧಿಕ್ಕರಿಸಿ, ಸಂವಿಧಾನ ವಿರೋಧವಾದ ನ್ಯಾಯವಿರೋಧಿ ಪ್ರತಿಭಟನೆ ನಡೆಸಿರುವುದು ಇವರ ಭಯೋತ್ಪಾದನೆ ಮತ್ತು ಭಯೋತ್ಪಾದಕ ಸಂಘಟನೆಗೆ ಬೆಂಬಲ ನಿಂತಿರುವುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದರು.
ಕಾಶ್ಮೀರ ದಲ್ಲಿ ಮಿತ್ರನೇ ಭಯೋತ್ಪಾದಕರಿಗೆ ಕೊಲ್ಲಲು ಸಹಕಾರ ನೀಡುವಂತೆ ಇಲ್ಲಿಯೂ ಸ್ನೇಹಿತನಂತೆ ವರ್ತಿಸಿ ದೇವದ್ರೋಹದ ಕೆಲಸ ಮಾಡುತ್ತಾರೆ. ಮುಸ್ಲಿಮ ಸಮುದಾಯಕ್ಕೆ ಮಸೀದಿ ಯಲ್ಲಿ ಭಯೋತ್ಪಾದನೆಯ ಶಿಕ್ಷಣ ಸಿಗುತ್ತಿದೆ. ಕಾಶ್ಮೀರದಲ್ಲಿ ನ್ಯಾಯಾಧೀಶರನ್ನು ಕೊಂದ ರೀತಿಯಲ್ಲಿಯೇ ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ ನ್ಯಾಯದೀಶರಿಗೆ ಬೆದರಿಕೆ ಕರೆ ಬಂದಿದೆ. ಇಂತಹ ಕೃತ್ಯಗಳನ್ನು ತಡೆಯದಿದ್ದರೆ ಇಡೀ ಹಿಂದೂ ಸಮಾಜವನ್ನು ನಾಶಮಾಡುತ್ತಾರೆ ಎಂದು ಎಚ್ಚರಿಕೆ ಕರೆಯನ್ನು ಅವರು ನೀಡಿದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ , ಮಾಜಿ ಶಾಸಕ ಎ.ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ಒಳಚರಂಡಿ ನಿಗಮ ಮಂಡಳಿ ನಿರ್ದೇಶಕಿ ಸುಲೋಚನ ಜಿ.ಭಟ್, ಪ್ರಮುಖರಾದ ರವೀಂದ್ರ ಕಂಬಳಿ,ಪ್ರಸಾದ್ ಕುಮಾರ್ ರೈ, ಪ್ರಕಾಶ್ ಅಂಚನ್, ಸುದರ್ಶನ ಬಜ, ಪುರುಷೋತ್ತಮ ಶೆಟ್ಟಿ, ಚೆನ್ನಪ್ಪ ಕೊಟ್ಯಾನ್, ದಿನೇಶ್ ಅಮ್ಟೂರು, ಪ್ರಭಾಕರ ಪ್ರಭು, ದೇವಪ್ಪ ಪೂಜಾರಿ, ಡೊಂಬಯ್ಯ ಅರಳ,ರಶ್ಮಿತ್ ಶೆಟ್ಟಿ, ಹರ್ಷಿಣಿ ಪುಷ್ಪಾನಂದ, ಚಂದ್ರಾವತಿ ಮತ್ತಿತರರು ಉಪಸ್ಥಿತರಿದ್ದರು.