ಅರಂತೋಡು ತೆಕ್ಕಿಲ್ ಪ್ರತಿಷ್ಠಾನದಿಂದ 17 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ…
ಸುಳ್ಯ: ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ (ರಿ )ಅರಂತೋಡು ಇದರ ವತಿಯಿಂದ 17ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟವು ಏ. 29 ರಂದು ತೆಕ್ಕಿಲ್ ಸಮುದಾಯ ಭವನದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ರ ಅಧ್ಯಕ್ಷತೆಯಲ್ಲಿ ನಡೆಯಿತು. ಅರಂತೋಡು ಜುಮಾ ಮಸೀದಿಯ ಖತಿಬಾರದ ಹಾಜಿ ಇಸಾಕ್ ಬಾಖವಿ ದುಃವಾ ನೆರವೇರಿಸಿದರು.
ಪವಿತ್ರವಾದ ರಂಝಾನ್ ತಿಂಗಳ ಕೊನೆಯ ಶುಕ್ರವಾರ ಹಾಗೂ 27ರ ಉಪವಾಸ ದಿವಸದಂದು ತೆಕ್ಕಿಲ್ ಪ್ರತಿಷ್ಠಾನದ ವತಿಯಿಂದ ಏರ್ಪಡಿಸಿದ 17 ನೇ ವರ್ಷದ ಸೌಹಾರ್ದ ಇಫ್ತಾರ್ ಕೂಟ ಹಾಗೂ ಇತ್ತೀಚೆಗೆ ನಿಧನ ಹೊಂದಿದ ಇದ್ದಿನ್ ಕುಂಞಿ ಯವರಿಗೆ ನುಡಿ ನಮನ ಕಾರ್ಯಕ್ರಮ ಟಿ. ಎಂ. ಶಾಹಿದ್ ತೆಕ್ಕಿಲ್ ಅವರ ನೇತೃತ್ವದಲ್ಲಿ ನಡೆಯಿತು.
ಪ್ರಾಸ್ತಾವಿಕವಾಗಿ ಮಾತಾನಾಡಿದ ಪ್ರತಿಷ್ಠಾನದ ಕಾರ್ಯದರ್ಶಿ ಅಶ್ರಫ್ ಗುಂಡಿ ಕಾರ್ಯಕ್ರಮದ ಬಗ್ಗೆ ವಿವರಿಸಿ ಕಳೆದ ಎರಡು ವರ್ಷ ಕೋವಿಡ್ ಮಹಾ ಮಾರಿಯಿಂದ ಮನೆ ಮನೆಗೆ ಕಿಟ್, ಇಫ್ತಾರ್ ಸಾಮಗ್ರಿಗಳನ್ನು ತಲುಪಿದ್ದು ಕಳೆದ ಹದಿನೇಳು ವರ್ಷಗಳ ಕಾಲ ಸರ್ವ ಧರ್ಮ ಹಾಗೂ ಜನಾಂಗದವರನ್ನು ಒಗ್ಗೂಡಿಸಿ ಕಾರ್ಯಕ್ರಮವನ್ನು ಮಾಡಿದ್ದೇವೆ ಮುಂದೆ ಕೂಡ ಸಮಾಜಕ್ಕೆ ಪೂರಕವಾದ ಕೆಲಸ ಮಾಡಲು ಬದ್ಧ ಎಂದರು
ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ ನ್ಯಾಯವಾದಿ ಹಾಗೂ ಸುಳ್ಯ ನಗರ ಪಂಚಾಯತ್ ಸದಸ್ಯ ಎಂ. ವೆಂಕಪ್ಪ ಗೌಡ ಮಾತನಾಡಿ ದೇಶದಲ್ಲೀಗ ಶಾಂತಿ ಮತ್ತು ಸಾಮರಸ್ಯಕ್ಕೆ ಸಹೋದರತೆಯ ಭಾವನೆ ಅಗತ್ಯವಾಗಿದೆ ಟಿ ಎಂ ಶಾಹಿದ್ ಅವರ ಸಹೋದರತೆಯ ಸದುದ್ದೇಶದಿಂದ ನಮ್ಮನ್ನೆಲ್ಲರನ್ನು ಕರೆದು ಇಫ್ತಾರ್ ಕೂಟವನ್ನು ಏರ್ಪಡಿಸಿದ್ದಾರೆ. ಅವರ ಈ ಕಾರ್ಯವು ಶ್ಲಾಘನೀಯ ಎಂದರು.
ಸುಳ್ಯ ಗಾಂಧಿನಗರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಕೆ. ಎಂ. ಮುಸ್ತಫಾ ಮಾತನಾಡಿ ಅರಂತೋಡಿನಂಥಹ ಗ್ರಾಮೀಣ ಪ್ರದೇಶದಲ್ಲಿ ತೆಕ್ಕಿಲ್ ಪ್ರತಿಷ್ಠಾನದ ಮೂಲಕ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ, ಸಾಮಾಜಿಕ ,ರಾಜಕೀಯ, ಕ್ರೀಡಾ, ಶಿಕ್ಷಣ ಮತ್ತು ಧಾರ್ಮಿಕ ಚಟುವಟಿಕೆ ಗಳನ್ನು ನಡೆಸುವುದರ ಮೂಲಕ ನಮಗೆಲ್ಲ ಮಾದರಿಯಾಗಿದ್ದಾರೆ ಎಂದರು.
ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ. ಸಿ. ಜಯರಾಮ ಮಾತನಾಡಿ ಹೃದಯವೈಶಾಲ್ಯ ಮತ್ತು ಶಾಂತಿ ಸಹಬಾಳ್ವೆಯಿಂದ ಜೀವನ ನಡೆಸಲು ಇಂತ ಸೌಹಾರ್ದ ಕೂಟಗಳು ಅತಿ ಅಗತ್ಯ ಎಂದರು.
ಸುಳ್ಯ ವೆಂಕಟರಮಣ ಸೊಸೈಟಿಯ ನಿರ್ದೇಶಕರ ಪಿ. ಎಸ್. ಗಂಗಾಧರ ಮಾತನಾಡಿ ಸೌಹಾರ್ದತೆಯಲ್ಲಿ ಬದುಕಲು ಬಾಳಲು ಸೌಹಾರ್ದತೆಯ ಇಂತಹ ಇಫ್ತಾರ್ ಕೂಟಗಳು ಹೆಚ್ಚು ಹೆಚ್ಚು ಆಗಬೇಕು ಇದನ್ನು ಆಯೋಜಿಸಿದ ಟಿ. ಎಂ. ಶಾಹಿದ್ ಅವರನ್ನು ನಾನೂ ಅಭಿನಂದಿಸುತ್ತೇನೆ ಎಂದರು.
ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ, ಕಲ್ಲುಗುಂಡಿ ವಿಷ್ಣು ಮೂರ್ತಿ ದೇವಸ್ಥಾನ ಅಧ್ಯಕ್ಷರಾದ ಜಗದೀಶ್ ರೈ ಕಲ್ಲುಗುಂಡಿ, ಗುತ್ತಿಗೆದಾರ ವಿ. ಕೆ. ಬಾಲನ್ ಕಲ್ಲುಗುಂಡಿ, ನಿವೃತ್ತ ಮುಖ್ಯೋಪಾಧ್ಯಾಯ ದಾಮೋದರ ಮಾಸ್ಟರ್ , ಡಾ. ಹರ್ಷವರ್ಧನ್ ಕುತ್ತಮೊಟ್ಟೆ ಶುಭ ಹಾರೈಸಿ ಅರ್ಥ ಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಂತೋಷ ಆಗಿದೆ ಎಂದರು. ಕಾರ್ಯಕ್ರಮದಲ್ಲಿ ಟಿ. ಎಂ ಬಾಬಾ ಹಾಜಿ ತೆಕ್ಕಿಲ್, ಜಿಲ್ಲಾಎನ್ ಎಸ್ ಯು ಐ ಅಧ್ಯಕ್ಷ ಸವಾದ್ ಸುಳ್ಯ, ಎನ್ ಎಸ್ ಯು ಐ ಸುಳ್ಯ ತಾಲೂಕು ಅಧ್ಯಕ್ಷ ಕೀರ್ತನ್ ಕೊಡಪಾಲ, ಎನ್ ಎಸ್ ಯು ಐ ಕಾರ್ಯದರ್ಶಿ ಪಿ ಯು ಉಬೈಸ್ ಗೂನಡ್ಕ, ಹಮೀದ್ ಹಾಜಿ ಬಿಳಿಯರು, ಬದ್ರುದ್ದೀನ್ ಪಟೇಲ್, ಸಿದ್ದಿಕ್ ಕೊಕ್ಕೋ, ಟಿ. ಎಂ. ಮೂಸಾನ್ ಹಾಜಿ ತೆಕ್ಕಿಲ್, ಟಿ. ಎಂ ಖಾಲಿದ್ ತೆಕ್ಕಿಲ್, ಟಿ. ಎಂ ಜಾವಿದ್ ತೆಕ್ಕಿಲ್, ಟಿ. ಎಂ ಶಾಜ್ ತೆಕ್ಕಿಲ್, ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬುಸಾಲಿ ಗೂನಡ್ಕ, ಎಸ್. ಕೆ. ಹನೀಫ್ ಸಂಪಾಜೆ, ಅಲ್ಪ ಸಂಖ್ಯಾತರ ಕಾಂಗ್ರೇಸ್ ಘಟಕದ ಅಧ್ಯಕ್ಷರಾದ ರಹೀಮ್ ಬೀಜದಕಟ್ಟೆ, ಕೆ. ಪಿ. ಸಿ. ಸಿ. ಸಾಮಾಜಿಕ ಜಾಲ ತಾಣದ ರಾಜ್ಯ ಪ್ರಧಾನ ಕಾರ್ಯದರ್ಶಿ ರಿಯಾಜ್ ಕಲ್ಲುಗುಂಡಿ, ಲತೀಫ್ ಸಖಾಫಿ ಗೂನಡ್ಕ, ಸಿ. ಎಂ. ಅಬ್ದುಲ್ಲ ಚೇರೂರು,ಹಾರಿಸ್ ಗೂನಡ್ಕ ಚಂದ್ರ ವಿಲಾಸ ಗೂನಡ್ಕ, ನ್ಯಾಯವಾದಿ ಧರ್ಮಪಾಲ ಕೊಯಿಂಗಾಜೆ, ಅಬ್ದುಲ್ಲ ಮಾಸ್ಟರ್, ಪಿ ಯು ಉನೈಸ್ ಗೂನಡ್ಕ, ಇಂಜಿನಿಯರ್ ನಾಸಿರ್ ಪೆರಾಜೆ, ಉನೈಸ್ ಪೆರಾಜೆ, ರಿಯಾಜ್ ಕಟ್ಟೆಕಾರ್,ಅನ್ಸಾರುದ್ದಿನ್ ಸಾಲ್ಮರ್, ಟಿ ಎಂ ರಝಾಕ್ ಹಾಜಿ ತೆಕ್ಕಿಲ್, ರಝಾಕ್ ಹಾಜಿ ಅಡಿಮರಡ್ಕ, ಅಮೀರ್ ಗೂನಡ್ಕ , ಟಿ ಬಿ ಅಬ್ದುಲ್ಲ ತೆಕ್ಕಿಲ್ ಗೂನಡ್ಕ, ಅಲ್ತಾಫ್ ಸೆಟ್ಟಿಯಡ್ಕ, ಸವಾದ್ ಕತಾರ್, ಎಸ್ ಎಂ ಮಜೀದ್ ಅರಂತೋಡು, ಎ ಇ ಹನೀಫ್ ಅರಂತೋಡು, ಗೋಪಾಲ್ ಪುರ , ಶಿವರಾಂ ಅಡ್ತಲೆ, ಕರುಣಾಕರ ಪೆಲ್ತಡ್ಕ, ಹಬೀಬ್ ಗುಂಡಿ, ಜನಾರ್ಧನ ಇರ್ನೆ ಮೊದಲಾದವರು ಭಾಗವಹಿಸಿದರು. ಅರಂತೋಡಿನ ಯುವಕರ ನೇತೃತ್ವದಲ್ಲಿ ನಡೆದ ಅಚ್ಚು ಕಟ್ಟಾದ ಅರ್ಥ ಗರ್ಭಿತ ಕಾರ್ಯಕ್ರಮದ ಬಗ್ಗೆ ಭಾಗವಹಿಸಿದ ಪ್ರತಿಯೊಬ್ಬರೂ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.