ಮೆಸ್ಕಾಂ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ಸಂಪಾಜೆ ಭೇಟಿ…

ಸುಳ್ಯ: ಮೆಸ್ಕಾಂ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ರಾಮಚಂದ್ರ ರವರು ಸಂಪಾಜೆ ಗ್ರಾಮದ ರಾಜರಾಂಪುರ ವಿದ್ಯುತ್ ಸಬ್ ಸ್ಟೇಷನ್ ಜಾಗ ಪರಿಶೀಲನೆ ಮಾಡಿ ಶೀಘ್ರದಲ್ಲಿ ಸ್ಥಳಕ್ಕೆ ಬೇಲಿ ಹಾಕಲು ಕ್ರಮ ಕೊಳ್ಳುವುದಾಗಿ ಭರವಸೆ ನೀಡಿದರು.
ಸಂಪಾಜೆ ಗ್ರಾಮಕ್ಕೆ ತಡೆ ರಹಿತ ವಿದ್ಯುತ್ ವ್ಯವಸ್ಥೆಗೆ ಟ್ರಾನ್ಸ್ ಫಾರ್ಮರ್ ಅಳವಡಿಕೆ ಬಗ್ಗೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜಿ. ಕೆ. ಹಮೀದ್ ಮನವರಿಕೆ ಮಾಡಿದರು. ಈ ಸಂದರ್ಭದಲ್ಲಿ ಜೂನಿಯರ್ ಇಂಜಿನಿಯರ್ ಅಭಿಷೇಕ್, ಅರಣ್ಯ ಇಲಾಖೆಯ ಶಿವಕುಮಾರ್ ಉಪಸ್ಥಿತರಿದ್ದರು.

Related Articles

Back to top button