ಕೋಟಿಗೀತಾ ಲೇಖನ ಯಜ್ಞ ದೀಕ್ಷೆ ಸ್ವೀಕರಿಸಿದ 105 ವಯಸ್ಸಿನ ಮಿಜಾರುಗುತ್ತು ಆನಂದ ಆಳ್ವ…

ಮೂಡುಬಿದಿರೆ: ಉಡುಪಿ ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ಚತುರ್ಥ ಪರ್ಯಾಯದ ಪಂಚ ಮಹಾಯೋಜನೆಗಳಲ್ಲೊಂದಾದ ಕೋಟಿಗೀತಾ ಲೇಖನ ಯಜ್ಞ ದೀಕ್ಷೆಯನ್ನು ಇಲ್ಲಿನ ಮಿಜಾರುಗುತ್ತು ಆನಂದ ಆಳ್ವ ಸ್ವೀಕರಿಸಿದ್ದಾರೆ.
ತಮ್ಮ ಮೊಮ್ಮಗ, ಆಳ್ವಾಸ್ ಎಜ್ಯುಕೇಷನ್ ಫೌಂಡೇಶನ್ ನ ಟ್ರಸ್ಟೀ ವಿವೇಕ್ ಆಳ್ವ ಅವರ ಸಹಕಾರದೊಂದಿಗೆ ಆನಂದ ಆಳ್ವರು ಭಗವದ್ಗೀತೆಯನ್ನು ಬರೆದು ಶ್ರೀಪಾದರ ಪರ್ಯಾಯದ ಅವಧಿಯಲ್ಲಿ 2024 ರಿಂದ 2026 ರ ಒಳಗೆ ಶ್ರೀ ಉಡುಪಿ ಕೃಷ್ಣನಿಗೆ ಸಮರ್ಪಿಸಲಿದ್ದಾರೆ. ಇದೇ ಬರುವ ಆಗಸ್ಟ್ 15 ರಂದು ತನ್ನ 105 ನೇ ಜನ್ಮದಿನಾಚರಣೆಯನ್ನು ಸಂಭ್ರಮಿಸಲಿರುವ ಅವರೊಂದಿಗೆ ಫೌಂಡೇಶನ್ ನ ಅಧ್ಯಕ್ಷರಾದ ಡಾ| ಎಂ.ಮೋಹನ ಆಳ್ವ , ಡಾ| ವಿನಯ್ ಆಳ್ವ ಅವರು ಕೂಡಾ ಯಜ್ಞ ದೀಕ್ಷಾ ಬದ್ಧರಾಗಿದ್ದಾರೆ. ಕೋಟಿಗೀತಾ ಲೇಖನ ಯಜ್ಞ ಸಮಿತಿಯ ಸಂಕರ್ಷಣ ಪ್ರಖಂಡದ ಪ್ರಚಾರಕ ಕೆ.ವಿ ರಮಣಾಚಾರ್ಯ ಅವರು ಸಂಕಲ್ಪ ಮಂತ್ರ ಪಠಿಸಿ ಲೇಖನ ಪುಸ್ತಕಗಳನ್ನು ನೀಡಿದರು.

Sponsors

Related Articles

Back to top button