ರೈತ ಸಂಘಟನೆಯ ವತಿಯಿಂದ ಆಲೆಟ್ಟಿ ಬ್ಯಾಂಕಿನ ಮುಂಭಾಗದಲ್ಲಿ ಪ್ರತಿಭಟನೆ….

ಸುಳ್ಯ: ಸಾಲ ಮನ್ನಾವನ್ನು ಕರ್ನಾಟಕದ ಈ ಹಿಂದಿನ ಸಮ್ಮಿಶ್ರ ಸರ್ಕಾರ ಮಾಡಿದ್ದು, ಅದು ಸಹಕಾರಿ ಬ್ಯಾಂಕ್ ಅಧಿಕಾರಿಗಳ ಅಸಡ್ಡೆ ಮತ್ತು ಬೇಜವಬ್ದಾರಿತನದಿಂದ ರೈತರ ಖಾತೆಗೆ ಜಮೆಯಾಗದೇ ಇದ್ದುದರ ವಿರುದ್ಧ ರೈತ ಸಂಘಟನೆಯ ವತಿಯಿಂದ ಆಲೆಟ್ಟಿ ಬ್ಯಾಂಕಿನ ಮುಂಭಾಗದಲ್ಲಿ ಅ.16 ರಂದು ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಯಂ. ವೆಂಕಪ್ಪ ಗೌಡರು ಇಂದಿನಿಂದ 15 ದಿನಗಳ ಒಳಗಾಗಿ ಹಿಂದಿನ ಸರ್ಕಾರದಿಂದ ಬಿಡುಗಡೆಯಾದ 1 ಲಕ್ಷ ಹಣವನ್ನು ಫಲಾನುಭವಿಗಳ ಖಾತೆಗೆ ತುಂಬುವ ಕೆಲಸವನ್ನು ಸಂಬಂಧಿಸಿದವರು ಮಾಡತಕ್ಕದ್ದು. ಈಗಿನ ರಾಜ್ಯ ಸರ್ಕಾರ ಸಾಲ ಮನ್ನಾ ಮಾಡುವುದು ಬಿಡಿ ಹಿಂದಿನ ಸರ್ಕಾರಗಳು ನೀಡಿದ ಹಣವನ್ನು ತಲುಪಿಸುವ ಪ್ರಯತ್ನವನ್ನಾದರೂ ಮಾಡಲಿ. ತಮ್ಮ ವೈಯುಕ್ತಿಕ ಲಾಭ ಕ್ಕಾಗಿ ಕೆಲವೊಂದು ಸಹಕಾರಿ ಬ್ಯಾಂಕಿನ ಅಧ್ಯಕ್ಷರುಗಳು ಆಣೆ ಪ್ರಮಾಣವನ್ನು ಮಾಡಿ ವೈಯುಕ್ತಿಕ ಲಾಭ ಪಡೆಯುವ ಪ್ರಯತ್ನವನ್ನು ಮಾಡಿದ್ದಾರೆ. ಅವರಿಗೆ ರೈತರ ಬಗ್ಗೆ ಕಾಳಜಿಯಿದ್ದರೆ ರೈತರ ಖಾತೆಗೆ ಹಣ ತುಂಬುವ ಪ್ರಯತ್ನವನ್ನು ಮಾಡುತ್ತೇವೆಂದು ರೈತರ ಮುಂದೆ ಪ್ರಮಾಣವನ್ನು ಮಾಡಲಿ ಎಂದರು. ಇವತ್ತು ಸಂಜೆಯ ಒಳಗಡೆ ಸಂಬಂಧಿಸಿದ ಅಧಿಕಾರಗಳು ಸ್ಥಳಕ್ಕೆ ಬಂದು ಮಾಹಿತಿಯನ್ನು ನೀಡತಕ್ಕದ್ದು, ಇಲ್ಲದಿದ್ದಲ್ಲಿ ಅಹೋರಾತ್ರಿ ಪ್ರತಿಭಟನೆಯನ್ನು ಮಾಡಲು ಹಿಂದೇಟು ಹಾಕುವುದಿಲ್ಲವೆಂದು ಅವರು ಎಚ್ಚರಿಸಿದರು.

Sponsors

Related Articles

Leave a Reply

Your email address will not be published. Required fields are marked *

Back to top button