ಸಂಪಾಜೆ ಗ್ರಾ ಪಂ ವ್ಯಾಪ್ತಿಯ ಗಡಿಕಲ್ಲು ಮುಂಡಡ್ಕ -ಆಲಡ್ಕ ಭಾಗದ ರಸ್ತೆ ಕಾಂಕ್ರಿಟ್ ಕಾಮಗಾರಿ ಉದ್ಘಾಟನೆ…
ಸುಳ್ಯ: ಸಂಪಾಜೆ ಗ್ರಾಮದ ಬಹು ದಿನಗಳ ಬೇಡಿಕೆಯಾದ ಗಡಿಕಲ್ಲು ರಸ್ತೆ ಕಾಮಗಾರಿ ಉದ್ಘಾಟನೆಯನ್ನು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು, ರಿಬ್ಬನ್ ಕಟ್ ಮಾಡುವ ಮೂಲಕ ನೆರವೇರಿಸಿದರು.
ತೆಕ್ಕಿಲ್ ಪ್ರತಿಷ್ಠಾನ ದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ತೆಂಗಿನ ಕಾಯಿ ಒಡೆದು ರಸ್ತೆ ಉದ್ಘಾಟನೆ ಮಾಡಿ ಈ ಭಾಗದಲ್ಲಿ ರಸ್ತೆ ಕಾಮಗಾರಿಗೆ ನನ್ನಿಂದ ಸಾಧ್ಯ ಇರುವ ಎಲ್ಲರಿಂದ ಅನುದಾನ ತರಿಸಿ ಕೊಟ್ಟಿದ್ದೇನೆ ಮುಂದೆಯೂ ನನ್ನಿಂದ ಸಾಧ್ಯ ಇರುವ ಎಲ್ಲಾ ಪ್ರಯತ್ನ ಮಾಡುತ್ತೇನೆ ಎಂದು ಶುಭ ಹಾರೈಕೆ ಮಾಡಿದರು.
ಅಭಿವೃದ್ಧಿ ಅದಿಕಾರಿ ಸರಿತಾ ಡಿಸೋಜಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ 5 ನೇ ವಾರ್ಡ್ ಸದಸ್ಯರುಗಳು ಕ್ರಿಯಾ ಯೋಜನೆ ಆದ ತಕ್ಷಣ ಕಾಮಗಾರಿ ಆರಂಭಿಸಿ ವೇಗವಾಗಿ ಕೆಲಸ ಮಾಡಿ ಉದ್ಘಾಟನೆ ಮಾಡಿದ್ದಾರೆ. ಗುತ್ತಿಗೆದಾರರು ಒಳ್ಳೆಯ ಕೆಲಸ ಮಾಡಿ ಸಹಕಾರ ನೀಡಿದ್ದಾರೆ, ಅವರಿಗೆ ಧನ್ಯವಾದಗಳು.
ಸಂಪಾಜೆ ಸೊಸೈಟಿ ಮಾಜಿ ಮೆನೇಜರ್ ಶಿವರಾಮ್ ಬಿ. ಆರ್. ಮಾತನಾಡಿ ನಾನು ಈ ರಸ್ತೆಯಲ್ಲಿ ನಿರಂತರ ಓಡಾಡುತ್ತೇನೆ. ಇಷ್ಟು ಗ್ರಾಮೀಣ ಪ್ರದೇಶದಲ್ಲಿ ಕಾಂಕ್ರಿಟ್ ರಸ್ತೆ ಆಗಿರುವುದು ನಿಜಕ್ಕೂ ಬಹಳ ಸಂತೋಷ ಆಯಿತು.
ಸಂಪಾಜೆ ಕಲ್ಲುಗುಂಡಿ ಸೊಸೈಟಿ ನಿರ್ದೇಶಕರಾದ ಹಮೀದ್ ಪಾಂಬಾರ್ ಮಾತನಾಡಿ ನಮ್ಮ ವಾರ್ಡ್ ಜನ ಪ್ರತಿನಿಧಿಗಳು ಆದ ಜಿ. ಕೆ. ಹಮೀದ್ ಗೂನಡ್ಕ, ಸುಂದರಿ, ರಜನಿ, ವಿಜಯ ಅಭಿವೃದ್ಧಿ ಕೆಲಸದಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾರೆ. ಗಡಿಕಲ್ಲು ಭಾಗದಲ್ಲಿ ಅಂಗನವಾಡಿ ಮಾಡಲು 10 ವರ್ಷದ ಬೇಡಿಕೆ ಇತ್ತು ಸ್ಥಳ ಇರಲಿಲ್ಲ. ಆದರೆ ಜಿ. ಕೆ.ಹಮೀದ್, ಸುಂದರಿ ಮುಂಡಡ್ಕ ಅಂಗನವಾಡಿ ಮಾಡಲು ಸ್ಥಳ ಹುಡುಕಿ ಅಲ್ಲಿ ಇದ್ದ ಮರ,ಹೈಟೆಂನ್ಷನ್ ವಿದ್ಯುತ್ ವಯರ್ ತೆಗಿಸಿ ತಹಸೀಲ್ದಾರ್ ಭೇಟಿ ಮಾಡಿ ಜಾಗ ಮಂಜೂರು ಮಾಡಿ ಅಂಗನವಾಡಿಗೆ ಅನುದಾನ ಇಟ್ಟು ಅಂಗನವಾಡಿ ಹಾಗೂ ಆವರಣಗೋಡೆ ನಿರ್ಮಾಣ ಮಾಡಿ ಮಾದರಿ ಕೆಲಸ ಮಾಡಿದಕ್ಕೆ ಅಭಿನಂದನೆ ಸಲ್ಲಿಸಿದರು. ಪ್ರಸ್ತಾವಿಕವಾಗಿ ಮಾತನಾಡಿದ ವಾರ್ಡ್ ಸದಸ್ಯರು ಹಾಗೂ ಮಾಜಿ ಅಧ್ಯಕ್ಷರಾದ ಜಿ. ಕೆ. ಹಮೀದ್ ಗೂನಡ್ಕ ಸುಮಾರು 1.5. ಕಿ. ಮೀ ಉದ್ದದ ರಸ್ತೆ ಕಾಮಗಾರಿ ಬಹುತೇಕ ಕಾಮಗಾರಿ ಕಾಂಕ್ರಿಟ್. ಈ ಕಾಮಗಾರಿಗೆ ಗ್ರಾಮ ಪಂಚಾಯತ್ ಸ್ವತಃ ನಿಧಿ,15 ನೇ ಹಣಕಾಸು, ಉದ್ಯೋಗ ಖಾತ್ರಿ ಅನುದಾನ, ವಿಧಾನ ಪರಿಷತ್ ಸದಸ್ಯರುಗಳಾದ ಪ್ರತಾಪ್ಚಂದ್ರ ಶೆಟ್ಟಿ, ಐವನ್ ಡಿಸೋಜಾ, ರಾಜ್ಯ ಸಭಾ ಸದಸ್ಯರಾದ ಆಸ್ಕರ್ ಪೆರ್ನಾಂಡಿಸ್. ಅಂಗನವಾಡಿ ಕೇಂದ್ರಕ್ಕೆ ನಾಸಿರ್ ಅಹಮದ್,ಅಧಿಕಾರಿ ವರ್ಗದವರ ಕೊಡುಗೆ ಅವಿಸ್ಮರಣೀಯ, ವಿಶೇಷವಾಗಿ ಅನುದಾನ ದೊರಕಿಸುವಲ್ಲಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಹೇಳಿ ಸರ್ವರನ್ನು ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಎಸ್. ಕೆ. ಹನೀಫ್, ಮಾಜಿ ಅಧ್ಯಕ್ಷರು ಹಾಲಿ ಸದಸ್ಯರುಗಳಾದ ಸುಂದರಿ ಮುಂಡಡ್ಕ, ಜಗದೀಶ್ ರೈ. ಸದಸ್ಯರುಗಳಾದ ರಜನಿ ಶರತ್, ವಿಜಯಕುಮಾರ್ ಆಲಡ್ಕ, ವಿಮಲಾ ಪ್ರಸಾದ್, ಸವಾದ್ ಗೂನಡ್ಕ, ಅಬೂಸಾಲಿ ಪಿ. ಕೆ. ಮಾಜಿ ಪಂಚಾಯತ್ ಸದಸ್ಯರಾದ ತಾಜ್ ಮಹಮ್ಮದ್, ಕೆ. ಎಂ. ಆಶ್ರಫ್ ಗುತ್ತಿಗೆದಾರ ಅಶ್ರಫ್ ಸಂಟ್ಯಾರ್, ಯೂಸುಫ್ ಕಲ್ಲುಗುಂಡಿ, ಅಬ್ದುಲ್ ರಹಿಮಾನ್ ಎಸ್. ಪಿ. ಅಬ್ಬಾಸ್. ಕೆ. ಕೆ. ಸಂಪಾಜೆ ಬದ್ರ್ ಜುಮಾ ಮಸೀದಿ ಅಧ್ಯಕ್ಷರಾದ ಮಹಮ್ಮದ್ ಹಮೀದಿಯಾ ಅಂಗನವಾಡಿ ಕಾರ್ಯಕರ್ತರಾದ ಶೀಲಾವತಿ, ಪಂಚಾಯತ್ ಸಿಬ್ಬಂದಿ ಭರತ್, ಉಮೇಶ್, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷರಾದ ಎಸ್. ಕೆ. ಹನೀಫ್ ಧನ್ಯವಾದ ಸಮರ್ಪಣೆ ಮಾಡಿದರು.