ಪಿವಿಕೆಆರ್ ವೈದ್ಯರ್ ನಿಧನಕ್ಕೆ ಕೆ. ಎಂ. ಮುಸ್ತಫ ಸಂತಾಪ…

ಸುಳ್ಯ: ವಿಶ್ವ ವಿಖ್ಯಾತ ಕೋಟಕ್ಕಲ್ ಆರ್ಯ ವೈದ್ಯ ಶಾಲಾ ಸುಳ್ಯ ಘಟಕದ ಸ್ಥಾಪಕರಾದ ಪಿವಿಕೆಆರ್ ವೈದ್ಯರ್ ರವರ ನಿಧನ ಕ್ಕೆ ಸುಳ್ಯ ನಗರ ಯೋಜನಾ ಪ್ರಾಧಿಕಾರ (SUDA)ಅಧ್ಯಕ್ಷ ಕೆ. ಎಂ. ಮುಸ್ತಫ ತೀವ್ರ ಸಂತಾಪ ವ್ಯಕ್ತಪಡಿಸಿರುತ್ತಾರೆ.
ಮೂರುವರೆ ದಶಕಗಳ ಹಿಂದೆ ಸುಳ್ಯದಲ್ಲಿ ಫ್ರೆಂಡ್ಸ್ ಸರ್ಕಲ್ ಸ್ಥಾಪಕರಾಗಿ ಹೊನಲು ಬೆಳಕಿನ ಅಂತರ ರಾಜ್ಯ ವಾಲಿಬಾಲ್ ಪಂದ್ಯಾಟಕ್ಕೆ ಹೊಸ ಭಾಷ್ಯ ವನ್ನು ಬರೆದ ವೈದ್ಯರ್, ಆ ಕಾಲದಲ್ಲಿ ರಾಜ್ಯದಲ್ಲಿಯೇ ಉತ್ತಮ ತಂಡಗಳನ್ನು ತರಿಸುವ ಮೂಲಕ ಸುಳ್ಯದ ಕ್ರೀಡಾ ಇತಿಹಾಸ ದಲ್ಲಿ ದಾಖಲೆ ಯನ್ನು ಬರೆದವರು. ವೈದ್ಯರ್ ಸ್ನೇಹ ಜೀವಿ. ಎಲ್ಲರೊಡನೆ ಪ್ರೀತಿ, ವಿಶ್ವಾಸ ದಿಂದ ಸುಳ್ಯದಲ್ಲಿ ಸಲ್ಲಿಸಿದ ಸೇವೆ ನಮಗೆಲ್ಲ ಮಾದರಿಯಾಗಿದೆ ಎಂದು ಕೆ. ಎಂ. ಮುಸ್ತಫ ತನ್ನ ಶೋಕ ಸಂದೇಶದಲ್ಲಿ ತಿಳಿಸಿರುತ್ತಾರೆ.