ಸುಳ್ಯ ಗಾಂಧಿನಗರ ಮಸ್ಜಿದ್ – ಗ್ರಾಂಡ್ ಮೀಲಾದ್ ಸಮ್ಮೇಳನ…

ಸುಳ್ಯ: ಪ್ರವಾದಿ ಮುಹಮ್ಮದ್ ಮುಸ್ತಫ (ಸ. ಅ ) ರವರ 1497 ನೇ ಜನ್ಮದಿನಾಚರಣೆ ಈದ್ ಮೀಲಾದ್ ನ್ನು ವಿವಿಧ ಕಾರ್ಯಕ್ರಮ ಗಳೊಂದಿಗೆ ಆಚರಿಸಲಾಯಿತು.
ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಕೆ ಎಂ ಮುಸ್ತಫ ಧ್ವಜಾರೋಹಣ ಗೈದರು. ಮುದರ್ರಿಸ್ ಶರಫುದ್ದೀನ್ ಸಅದಿ
ಉದ್ಘಾಟನೆಗೈದರು.ಖತೀಬ್ ಅಶ್ರಫ್ ಖಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ನಡೆಸಿದರು
ವೇದಿಕೆಯಲ್ಲಿ ಉಪಾಧ್ಯಕ್ಷ ಹಾಜಿ ಮಹಮ್ಮದ್ ಬಾರ್ಪಣೆ, ಕಾರ್ಯದರ್ಶಿ ಕೆ ಬಿ ಅಬ್ದುಲ್ ಮಜೀದ್, ಖಜಾಂಚಿ ಮೊಯಿದೀನ್ ಫ್ಯಾನ್ಸಿ, ನಗರ ಪಂಚಾಯತ್ ಸದಸ್ಯ ಕೆ ಎಸ್ ಉಮ್ಮರ್, ಮದರಸ ಗಳಾದ ಹಮೀದ್ ಬೀಜ ಕೊಚ್ಚಿ, ಎಸ್ ಎಂ ಹಮೀದ್,ಮಾಜಿ ಅಧ್ಯಕ್ಷ ಆಧಮ್ ಹಾಜಿ, ನಿರ್ದೇಶಕರುಗಳಾದ ಎಸ್.ಎ.ಹಮೀದ್ ಹಾಜಿ, ಖಾದರ್ ಆಜಾದ್,ಅನ್ಸಾರ್ ಅಧ್ಯಕ್ಷ ಅಬ್ದುಲ್ ಶುಕೂರ್,ಕಾರ್ಯದರ್ಶಿ ಬಿ. ಎಂ. ಹನೀಫ್,ಅನ್ಸಾರಿಯಾ ಎಜುಕೇಶನ್ ಸೆಂಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಜನತ, ಕಾರ್ಯದರ್ಶಿ ಲತೀಫ್ ಹರ್ಲಡ್ಕ, ಕೋಶಧಿಕಾರಿ ಎಸ್ ಪಿ ಅಬೂಬಕ್ಕರ್,ಮಾಜಿ ನಿರ್ದೇಶಕ ಗಫಾರ್ ಹಾಜಿ,
ಉಪಸ್ಥಿತರಿದ್ದರು.
ಪ್ರಾರಂಭ ದಲ್ಲಿ ಮುಅಝೀನ್ ಝವುಅರಿ ಉಸ್ತಾದ್ ಖುರ್ ಆನ್ ಪಾರಾಯಣ ನಡೆಸಿದರು.

Related Articles

Back to top button