ಅರಂತೋಡು- ಎಸ್ ಕೆ ಎಸ್ ಎಸ್ ಎಫ್ ಶಾಖೆ ವತಿಯಿಂದ 3ನೇ ವಾರ್ಷಿಕ ಮಜ್ಲಿಸ್ ನ್ನೂರ್ ಕಾರ್ಯಕ್ರಮ ಹಾಗೂ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅನುಸ್ಮರಣೆ…

ಸುಳ್ಯ: ಅರಂತೋಡು ಎಸ್ ಕೆ ಎಸ್ ಎಸ್ ಎಫ್ ವತಿಯಿಂದ 3 ನೇ ವರ್ಷದ ಮಜ್ಲಿಸ್ ನ್ನೂರ್ ಕಾರ್ಯಕ್ರಮ ಹಾಗೂ ಇತ್ತೀಚೆಗೆ ಮರಣ ಹೊಂದಿದ ಸೈಯ್ಯದುಲ್ ಉಮ್ಮ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅನುಸ್ಮರಣೆ ಕಾರ್ಯಕ್ರಮ ಮಾ.13 ರಂದು ಅರಂತೋಡು ಮಸೀದಿಯಲ್ಲಿ ಮಗ್ರಿಬ್ ನಮಾಜಿನ ಬಳಿಕ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆ ಅಧ್ಯಕ್ಷ ಅಶೀಕ್ ಕುಕ್ಕುಂಬಳ ವಹಿಸಿದರು. ಅರಂತೋಡು ಜುಮ್ಮಾಮಸೀದಿ ಖತೀಬತರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ಯವರು ಮಜ್ಲಿಸ್ ನ್ನೂರ್ ಕಾರ್ಯಕ್ರಮದ ನೇತೃತ್ವ ವಹಿಸಿ ಇತ್ತೀಚೆಗೆ ಮರಣ ಹೊಂದಿದ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ಅನುಸ್ಮರಣಾ ದಲ್ಲಿ ಮಾತನಾಡಿ ಪಾಣಕ್ಕಾಡ್ ಹೈದರಾಲಿ ಶಿಹಾಬ್ ತಂಙಳ್ ದೇಶ ಕಂಡ ಅಪ್ರತಿಮ ನಾಯಕ ಅವರು ಸಾವಿರಾರು ಮಸೀದಿಯ ಖಾಝಿಯಾಗಿ ಕಾರ್ಯನಿರ್ವಹಿಸಿ ಸಾಮರಸ್ಯ ಮೆರೆದವರು.ಅವರು ಸರ್ವರೊಂದಿಗೆ ಸಹೋದರತೆಯಿಂದ ಇದ್ದರು. ಅವರು ಸರ್ವ ಧರ್ಮದೊಂದಿಗೆ ಸೌಹಾರ್ದತೆಯೊಂದಿಗೆ ಬಾಳಬೇಕು ಎಂದು ಹೇಳಿದರು. ಮುಖ್ಯ ಅತಿಥಿ ಗಳಾಗಿ ತೆಕ್ಕಿಲ್ ಪ್ರತಿಷ್ಠಾನ ಅಧ್ಯಕ್ಷ ಟಿ.ಎಮ್.ಶಹೀದ್ ತೆಕ್ಕಿಲ್, ಅರಂತೋಡು ಜುಮ್ಮಾ ಮಸೀದಿ ಅಧ್ಯಕ್ಷ ಅಶ್ರಫ್ ಗುಂಡಿ , ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಹನೀಫ್ ದಾರಿಮಿ,ಸಹ ಅಧ್ಯಾಪಕ ಸಾಜಿದ್ ಅಝ್ಝಹರಿ,ಪೇರಡ್ಕ ಜುಮ್ಮಾಮಸೀದಿ ಖತೀಬರಾದ ರಿಯಾಜ್ ಫೈಝಿ ಎಮ್ಮೆಮಾಡು,ಸುಳ್ಯ ಎಸ್ ವೈ ಎಸ್ ಅಧ್ಯಕ್ಷ ಹಮೀದ್ ಹಾಜಿ,ಎಸ್ ಕೆ ಎಸ್ ಎಸ್ ಎಫ್ ಜಿಲ್ಲಾ ಕೌನ್ಸಿಲ್ ತಾಜುದ್ದೀನ್ ಟರ್ಲಿ,ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೆಶನ್ ಅಧ್ಯಕ್ಷ ಅಬ್ದುಲ್ ಮಜೀದ್,ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಕೊಶಾಧಿಕಾರಿ ಹಾಜಿ ಅಜರುದ್ದೀನ್ ,ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು,ಸೇರಿದಂತೆ ಮುಂತಾದವರು ಭಾಗವಹಿಸಿದರು.ಕಾರ್ಯಕ್ರಮದ ಕೊನೆಯಲ್ಲಿ ತಬ್ರುಕ್ ವಿತರಿಸಲಾಯಿತು.ಅರಂತೋಡು ಎಸ್ ಕೆ ಎಸ್ ಎಸ್ ಎಫ್ ಶಾಖೆಯ ಕಾರ್ಯದರ್ಶಿ ಮುಝಮ್ಮಿಲ್ ಸ್ವಾಗತಿಸಿ ಜುಬೈರ್ ವಂದಿಸಿದರು.

Sponsors

Related Articles

Back to top button